ಹೈದರಬಾದ್,ಮೇ18(DaijiworldNews/AZM):: ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ,ನಟ ಕಮಲ್ ಹಾಸನ್ ಮೇಲೆ ಮೊಟ್ಟೆ ಹಾಗೂ ಕಲ್ಲು ಎಸೆದ ಆರೋಪದ ಮೇಲೆ ಬಿಜೆಪಿ ಸ್ಥಾನಿಕ ಪದಾಧಿಕಾರಿ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅರವಾಕುರಿಚಿಯಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಕಮಲ್ ಹಾಸನ್ ಮೇಲೆ ಮೊಟ್ಟೆ ಹಾಗೂ ಕಲ್ಲು ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದರು.
ಬುಧವಾರ ಕೂಡ ಕಮಲ್ ಹಾಸನ್ ಮಧುರೈ ವಿಧಾನಸಭಾ ಚುನಾವಣೆ ಕ್ಷೇತ್ರದ ವ್ಯಾಪ್ತಿಯಲ್ಲಿನ ತಿರುಪ್ಪರಾನ್ಕುಂದ್ರಮ್ನಲ್ಲಿ ಚುನಾವಣಾ ರ್ಯಾಲಿ ಹಮ್ಮಿಕೊಂಡಿದ್ದರು. ವಾಹನದ ಮೇಲೆ ನಿಂತು ಕಮಲ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕೆಲವರು ಅವರ ಮೇಲೆ ಚಪ್ಪಲಿ ಎಸೆದಿದ್ದರು. ಆದರೆ ಅವು ಕಮಲ್ ವಾಹನಕ್ಕೆ ತಾಗಿ ಕೆಳಕ್ಕೆ ಬಿದ್ದಿವೆ.