ಬೆಂಗಳೂರು,ಮೇ18(DaijiworldNews/AZM):ಈಗಾಗಲೇ ರಾಜ್ಯದ ಜನತೆಗೆ ಬೇಸಿಗೆಯ ಬಿಸಿ ಏರುತ್ತಿದ್ದು, ಸಾಕಷ್ಟು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಮತ್ತೇ ಮೂರು ನಾಲ್ಕು ದಿನಗಳು ದ.ಕ. ಹಾಗೂ ಉತ್ತರ ಕರ್ನಾಟಕದಲ್ಲಿ ಬಿಸಿಲ ಬಿಸಿ ಏರಿಕೆಯಾಗಲಿದ್ದು, ಜನರಿಗೆ ಎಚ್ಚರಿಕೆವಹಿಸುವಂತೆ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆ ಸೂಚಿಸಿದೆ.
ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಬಿಸಿಲಿನ ಬಗ್ಗೆ ಎಚ್ಚರಿಕೆಯ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯದ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ, ಜಿಲ್ಲೆಗಳಲ್ಲಿ ಈ ತಾಪಮಾನ ಹೆಚ್ಚಿರಲಿದ್ದು, ಜನರು ಬಿಸಿಲಿನಿಂದ ಎಚ್ಚರಿಕೆ ವಹಿಸುವಂತೆ ತಿಳಿಸಿದೆ.
ಸಾಮಾನ್ಯ ದಿನಗಳಲ್ಲಿನ ಬಿಸಿಲಿನ ತಾಪಕ್ಕೆ ನಾವುಗಳು ತಡೆದು ಕೊಳ್ಳುವುದು ಕಷ್ಟವಾಗಿದೆ. ಹೀಗಿದ್ದೂ ಸಾಮಾನ್ಯ ದಿನಗಳಿಗಿಂದ 2-3 ಸೆಲ್ಸಿಯಸ್ ತಾಪಮಾನ ಹೆಚ್ಚು ಇರಲಿದೆ ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ತನ್ನ ಮಾಹಿತಿಯಲ್ಲಿ ತಿಳಿಸಿದೆ.
ಇನ್ನೂ ಮೂರು ನಾಲ್ಕು ದಿನ ಹೆಚ್ಚುತ್ತಿರುವ ಬಿಸಿಲಿನ ಕಿರಣಗಳಿಂದ ಜನರು ರಕ್ಷಣೆ ಹೊಂದಲು ಸಾಕಷ್ಟು ಎಚ್ಚರವಹಿಸಬೇಕಾಗಿದ್ದು, ಕೊಂಚ ಬಿಸಿಲಿನ ಕಿರಣದಿಂದ ದೂರ ಇದ್ದರೆ ಒಳಿತು. ಇಲ್ಲವಾದಲ್ಲಿ ಬಿಸಿಲಿನಿಂದ ರಕ್ಷಿಸಲು ರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಒಳಿತು.