ಹಾಸನ, ಮೇ 18, (Daijiworld News/SM): ರಾಜ್ಯ ಸಚಿವ ಹಾಗೂ ತಮ್ಮ ಪತಿ ರೇವಣ್ಣ ಅವರು ಮುಖ್ಯಮಂತ್ರಿ ಹುದ್ದೆಗೆ ಏರುವುದು ಭಗವಂತನ ಇಚ್ಛೆ ಎಂದು ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರು ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಈಗ ನಮ್ಮ ಕುಟುಂಬದವರೇ ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಪಕ್ಕಕ್ಕೆ ಸರಿಸಿ ರೇವಣ್ಣ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಇಚ್ಛೆ ನಮ್ಮದಲ್ಲ. ಇವತ್ತಿನ ಸಂದರ್ಭದಲ್ಲಿ ಕುಮಾರಸ್ವಾಮಿ ಅವರೇ ಸಿಎಂ. ಇದರಲ್ಲಿ ಯಾವುದೇ ಬದಲಾವಣೆ ಬೇಕಾಗಿಲ್ಲ. ಪಕ್ಷದವರಾಗಲಿ, ಕುಟುಂಬದವರಾಗಲಿ ಆ ಸ್ಥಾನಕ್ಕೆ ಆಸೆಪಟ್ಟಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಮನೆಯವರೇ ಸಿಎಂ ಆಗಿರುವುದರಿಂದ ಅವರೇ ಇರಲಿ ಎನ್ನುವುದು ಬಯಕೆ ಎಂದರು.