ನವದೆಹಲಿ,ಮೇ19(DaijiworldNews/AZM): ಇಂದು ಸಂಜೆ ಆರು ಗಂಟೆಗೆ ಚುನಾವಣೋತ್ತರ ಸಮೀಕ್ಷೆ ಅಥವಾ ಎಕ್ಸಿಟ್ ಪೋಲ್ ಪ್ರಕಟವಾಗಲಿದೆ.
ಜನಪ್ರತಿನಿಧಿ ಕಾಯ್ದೆ ಹಾಗೂ ಚುನಾವಣಾ ಆಯೋಗದ ನಿರ್ದೇಶನದ ಮೊದಲ ಹಂತದ ಮತದಾನಕ್ಕೆ 48 ಗಂಟೆಗಳಿರುವ ಮುಂಚೆ ಹಾಗೂ ಕೊನೆಯ ಹಂತದ ಮತದಾನ ಅಂತ್ಯವಾಗುವವರೆಗೂ ಯಾವುದೇ ರೀತಿಯ ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಸಮೀಕ್ಷೆಯನ್ನು ಮಾಡಕೂಡದು. ಹೀಗಾಗಿ ಕಳೆದ 40ದಿನಗಳಿಂದ ನಡೆಯುತ್ತಿರುವ ಮತದಾನದ ಫಲಿತಾಂಶದ ಕುರಿತು ಕೋಟ್ಯಂತರ ಮತದಾರರಲ್ಲಿ ಕುತೂಹಲ ಮೂಡಿಸಿದೆ.
ಮೇ 23ಕ್ಕೆ ಫಲಿತಾಂಶವಿದ್ದರೂ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಅಂದಾಜು ಲೆಕ್ಕಾಚಾರ ಈ ಎಕ್ಸಿಟ್ ಪೋಲ್ ವರದಿ ಮಾಡಲಿದೆ.
1960ರ ದಶಕದಲ್ಲಿ ಸಿಎಸ್ಡಿಎಸ್ ಎನ್ನುವ ಸಂಸ್ಥೆ ಮೂಲಕ ಭಾರತದಲ್ಲಿ ಚುನಾವಣೋತ್ತರ ಸಮೀಕ್ಷೆ ಆರಂಭವಾಯಿತು. ಆದರೆ 1998ರವರೆಗೂ ಮಾಧ್ಯಮ ವಲಯದಲ್ಲಿ ಗಂಭೀರ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿರಲಿಲ್ಲ.
ಭಾರತದಲ್ಲಿ 1999-2004, 2009-2014ರ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಪ್ರಕಟವಾಗಿತ್ತು.
ಈ ನಾಲ್ಕು ಲೋಕಸಭಾ ಚುನಾವಣೆಯ ಪೈಕಿ 99 ಹಾಗೂ 2014ರಲ್ಲಿ ಚುನಾವಣೋತ್ತರ ಸಮೀಕ್ಷೆ ನಿಜವಾಗಿದ್ದರೆ 2004, 2009ರಲ್ಲಿ ಸುಳ್ಳಾಗಿದೆ ಹೀಗಾಗಿ ಈ ಬಾರಿ ಯಾವ ಮಾಧ್ಯಮ ಹಾಗೂ ಏಜೆನ್ಸಿಗಳು ನಿಖರ ಫಲಿತಾಂಶ ಅಂದಾಜಿಸುತ್ತವೆ ಎನ್ನುವುದು ಕುತೂಹಲ ಮೂಡಿಸಿದೆ.