ಬೆಂಗಳೂರು,ಮೇ19(DaijiworldNews/AZM): ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಸ್ಫೋಟ ನಡೆದು ಒಬ್ಬರು ಮೃತಪಟ್ಟ ಘಟನೆ ಇಂದು ನಡೆದಿದೆ. ರಾಜರಾಜೇಶ್ವರಿ ನಗರದಲ್ಲಿರುವ ಶಾಸಕ ಮುನಿರತ್ನ ಮನೆ ಬಳಿ ಈ ಸ್ಫೋಟ ನಡೆದಿದ್ದು, ಸ್ಪೋಟದ ತೀವ್ರತೆಗೆ ವ್ಯಕ್ತಿಯೋರ್ವರ ದೇಹ ಛಿದ್ರಗೊಂಡಿದೆ.
ವೆಂಕಟೇಶ್(45) ಮೃತಪಟ್ಟ ವ್ಯಕ್ತಿ. ಮೃತ ವೆಂಕಟೇಶ್ವೈಯಾಲಿಕಾವಲ್ ದೋಬಿಗಾಟ್ನಲ್ಲಿ ಕುಟುಂಬಸ್ಥರ ಜೊತೆ ವಾಸವಾಗಿದ್ದ. ವೆಂಕಟೇಶ್ ಮತ್ತು ಮಗಳು ಮುನಿರತ್ನ ಮನೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದರು. ವೆಂಕಟೇಶ್ ಹತ್ತು ಗಂಟೆ ಸುಮಾರಿಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಮುನಿರತ್ನ ಮನೆ ಮುಂದೆ ಹೋಗುತ್ತಿದ್ದ. ಇದ್ದಕ್ಕಿದ್ದಂತೆ ಅನುಮನಾಸ್ಪದ ವಸ್ತು ಸ್ಫೋಟಗೊಂಡಿದೆ. ಮೊಬೈಲ್ ಕೂಡಾ ನುಚ್ಚು ನೂರಾಗಿದೆ. ಸ್ಟೋಟದ ತೀವ್ರತೆಗೆ ಪಕ್ಕದ ಮನೆಯ ಬಾಗಿಲು ಹಾಗೂ ಗೋಡೆ ಛಿದ್ರವಾಗಿದೆ.
ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ. ಸ್ಥಳಕ್ಕೆ ಡಿಸಿಪಿ ದೇವರಾಜ್, ಸ್ಥಳಕ್ಕೆ ಕಮೀಷನರ್ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನಿರತ್ನ ಮನೆಯ ಮುಂಭಾಗದ ಕಾರ್ ಪಾರ್ಕಿಂಗ್ ಬಳಿ ಸ್ಪೋಟವಾಗಿದೆ ಎನ್ನಲಾಗಿದೆ. ಮೃತ ವೆಂಕಟೇಶ್ ಮುನಿರತ್ನ ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.