ಬೆಂಗಳೂರು,ಮೇ19(DaijiworldNews/AZM) : ಅನಾರೋಗ್ಯದಿಂದ ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ದೇವರಾಜ್ ಅವರು ಇಂದು ಮೃತಪಟ್ಟಿದ್ದಾರೆ.
ಅವರು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ರಾಧಿಕಾ ಕುಮಾರಸ್ವಾಮಿ ಅವರ ತಂದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಮಂಗಳೂರಿನ ಸೋಲೆತ್ತೂರು ಗ್ರಾಮದಲ್ಲಿ ಕೋಲ ಸಂಭ್ರಮದಲ್ಲಿ ರಾಧಿಕಾ ಅವರ ಕುಟುಂಬ ಭಾಗಿಯಾಗಿತ್ತು. ಸಂಭ್ರಮದ ಬಳಿಕ ದೇವರಾಜ್ ಅವರಿಗೆ ಕಫ ಹೆಚ್ಚಾಗಿದ್ದರಿಂದ ಇಂದು ಕೊನೆಯುಸಿರೆಳೆದಿದ್ದಾರೆ.