ನವದೆಹಲಿ, ಮೇ19(Daijiworld News/SS): ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ದೂರು ದಾಖಲಸಿದೆ.
ಟಿಎಂಸಿ ನಾಯಕ ಡೆರೆಕ್ ಓಬ್ರೆಯಾನ್ ಅವರು ಬರೆದಿರುವ ಪತ್ರದಲ್ಲಿ ಮತದಾನ ಕೊನೆಯ ಹಂತದ ಚುನಾವಣೆಯ ಪ್ರಚಾರ ಮುಗಿದರೂ ಸಹ ಮಾಧ್ಯಮಗಳು ಪ್ರಧಾನಿ ಕೇದಾರನಾಥ ಭೇಟಿಯನ್ನು ಸಂಪೂರ್ಣವಾಗಿ ಮತ್ತು ವ್ಯಾಪಕವಾಗಿ ಪ್ರಸಾರ ಮಾಡಿವೆ. ಅವರ ಚಟುವಟಿಕೆಗಳ ಪ್ರತಿ ಕ್ಷಣದ ಮಾಹಿತಿಗಳಿಗೂ ವ್ಯಾಪಕವಾಗಿ ಪ್ರಚಾರ ನೀಡಲಾಯಿತು. ಮತದಾರರ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವುದೇ ಉದ್ದೇಶವಾಗಿತ್ತು. 'ಮೋದಿ, ಮೋದಿ' ಮಂತ್ರವನ್ನೂ ಆಗಾಗ್ಗೆ ಕೇಳಿಸಲಾಗುತ್ತಿತ್ತು ಎಂದು ಟಿಎಂಸಿ ನಾಯಕ ದೂರಿದ್ದಾರೆ.
ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಆದರೆ, ಚುನಾವಣೆ ಆಯೋಗ ದುರದೃಷ್ಟವಶಾತ್ ಪ್ರಧಾನಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಡೆರಿಕ್ ಒಬ್ರೈನ್ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೇದಾರನಾಥದಲ್ಲಿ ಕಳೆದಿದ್ದರು, ಮಾತ್ರವಲ್ಲ, ಬದ್ರಿನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.