ನವದೆಹಲಿ, ಮೇ19(Daijiworld News/SS): ಪ್ರಧಾನಿ ನರೇಂದ್ರ ಮೋದಿ ಮುಂದೆ ಚುನಾವಣಾ ಆಯೋಗ ಶರಣಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಚುನಾವಣಾ ಬಾಂಡ್ನಿಂದ ಹಿಡಿದು ಇವಿಎಂ, ಚುನಾವಣಾ ದಿನಾಂಕದ ಬದಲಾವಣೆ, ನಮೋ ಟಿ.ವಿ, ಮೋದಿಯವರ ಸೇನೆ ಮತ್ತು ಇದೀಗ ಕೇದಾರನಾಥ ನಾಟಕಗಳನ್ನು ನೋಡುವಾಗ ಚುನಾವಣಾ ಆಯೋಗವು ಮೋದಿ ಮತ್ತು ಅವರ ತಂಡದ ಮುಂದೆ ಶರಣಾಗಿದೆ ಎಂಬುದನ್ನು ಎಲ್ಲ ಭಾರತೀಯರಿಗೆ ತಿಳಿಸುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್'ನಲ್ಲಿ ದೂರಿದರು
ಈ ಹಿಂದೆ ನನಗೆ ಚುನಾವಣಾ ಆಯೋಗದ ಬಗ್ಗೆ ಭಯ, ಗೌರವ ಇತ್ತು. ಆದರೆ ಅದು ಈ ಎಲ್ಲಾ ಬೆಳವಣಿಗೆಗಳನ್ನು ನೋಡುವಾಗ ಇಲ್ಲದಾಗಿದೆ ಎಂದು ರಾಹುಲ್ ಟ್ವೀಟಿಸಿದ್ದಾರೆ.
ಚುನಾವಣಾ ಆಯೋಗ ಪಕ್ಷಪಾತ ಮಾಡುತ್ತಿದೆ ಎಂದು ಈ ಹಿಂದೆಯೂ ಕಾಂಗ್ರೆಸ್ ದೂರಿತ್ತು.