ಬೆಂಗಳೂರು,ಮೇ 20(DaijiworldNews/AZM):ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿರೋ ಹಿನ್ನೆಲೆ ನಗರದಾದ್ಯಂತ ಸಂಪೂರ್ಣ ಬಂದೋಬಸ್ತ್ ಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
7 ಡಿಸಿಪಿಗಳು, 22 ಎಸಿಪಿಗಳು, 77 ಇನ್ಸ್ಪೆಕ್ಟರ್ಗಳು, 180 ಸಬ್ ಇನ್ಸ್ಪೆಕ್ಟರ್ಗಳು ಸೇರಿದಂತೆ 2000 ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ಗೆ ನೇಮಕ ಮಾಡಲಾಗಿದೆ. ಹಾಗೇ ಎರಡು ಪ್ಯಾರಾ ಮಿಲಿಟರಿ ಪಡೆ, 23 ಕೆಎಸ್ಆರ್ಪಿ ತುಕಡಿಗಳನ್ನ ನಿಯೋಜಿಸಲಾಗುತ್ತದೆ. ಪ್ರತೀ ಸೆಂಟರ್ನಿಂದ ನೂರು ಮೀಟರಿಗೆ ಬೌಂಡರಿ ನಿರ್ಮಾಣ ಮಾಡಲಾಗುತ್ತದೆ, ಐಡಿ ಇರುವವರಿಗೆ ಮಾತ್ರ ಮತ ಎಣಿಕೆ ಸೆಂಟರ್ ಒಳಗೆ ಬಿಡಲಾಗುವುದು. ಮಾಧ್ಯಮದವರಿಗೆ ಮೀಡಿಯಾ ರೂಮ್ವರೆಗೂ ಮಾತ್ರ ಎಂಟ್ರಿ ಇರುತ್ತದೆ ಎಂದು ತಿಳಿಸಿದ್ದಾರೆ.
23ರಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12ರವರೆಗೆ 144 ಸೆಕ್ಷನ್ ಜಾರಿ ಮಾಡಲಾಗುತ್ತದೆ ಹಾಗೂ ಮದ್ಯ ಮಾರಾಟ ನಿಷೇಧವಿರುತ್ತದೆ ಎಂದು ಅವರು ತಿಳಿಸಿದ್ದಾರೆ.