ನವದೆಹಲಿ,ಮೇ21(Daijiworldnews/azm):ದೆಹಲಿಯಲ್ಲಿ ಪ್ರತಿಪಕ್ಷ ನಾಯಕರ ಜೊತೆ ಇಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎಂ ಚಂದ್ರಬಾಬು ನಾಯ್ಡು ಅವರು ಸಭೆ ನಡೆಸಲಿದ್ದಾರೆ.
ಪ್ರತಿಪಕ್ಷ ಮುಖಂಡರಾದ ಮಾಯಾವತಿ, ಅಖಿಲೇಶ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಶರದ್ ಪವಾರ್, ಶರದ್ ಯಾದವ್ ಅವರನ್ನು ಭೇಟಿಯಾಗಿ ಪ್ರತ್ಯೇಕವಾಗಿ ನಾಯ್ಡು ಚರ್ಚಿಸಿದ್ದರು.ಆದರೆ ಇಂದು ಎಲ್ಲಾ ಪ್ರತಿಪಕ್ಷಗಳು ಪ್ರತಿಪಕ್ಷ ನಾಯಕರ ಜಂಟಿ ಸಭೆಯನ್ನು ನಡೆಸಲು ನಾಯ್ಡು ಮುಂದಾಗಿದ್ದು, ಮತದಾನೋತ್ತರ ಸಮೀಕ್ಷೆ ಹಿನ್ನೆಲೆಯಲ್ಲಿ ಎಷ್ಟು ಪ್ರತಿಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತವೆ ಎನ್ನುವುದು ಕುತೂಹಲ ಮೂಡಿಸಿದೆ."