ಪಶ್ಚಿಮಬಂಗಾಲ,ಮೇ21(DaijiworldNews/AZM):ಪ.ಬಂಗಾಲದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ಘರ್ಷಣೆ ಮುಂದುವರಿದಿದ್ದು, ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ.ಸೋಮವಾರ ತಡ ರಾತ್ರಿ ಕೂಚ್ ಬೆಹರ್ನ ಸಿತಾಯಿ ಪ್ರದೇಶದಲ್ಲಿ ನಡೆದ ಮಾರಾಮಾರಿಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರಿಗೆ ಗುಂಡೇಟು ತಗುಲಿದೆ.

ಬಿಜೆಪಿ ಕಾರ್ಯಕರ್ತನಿಗೆ ಸೇರಿದೆ ಎನ್ನಲಾದ ಅಂಗಡಿಯೊಂದನ್ನು ಧ್ವಂಸಗೈಯಲಾಗಿದ್ದು,ಈ ವೇಳೆ ಘರ್ಷಣೆ ನಡೆದಿದೆ.ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಟಿಎಂಸಿ ನಮ್ಮ ಕಾರ್ಯಕರ್ತರು ದಾಳಿ ನಡೆಸಿಲ್ಲ ಎಂದು ಹೇಳಿದೆ. ರಾಜ್ಯದೆಲ್ಲೆಡೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.