ಮುಂಬೈ,ಮೇ21(DaijiworldNews/AZM):ಕೋಟ್ಯಾಂತರ ಇನ್ ಸ್ಟಾಗ್ರಾಮ್ ಖಾತೆಗಳ ಮಾಹಿತಿ ಸೋರಿಕೆಯಾಗುತ್ತಿದೆ ಎನ್ನುವ ವಿಚಾರವನ್ನು ಮುಂಬೈ ಮೂಲದ ಸೋಶಿಯಲ್ ಮೀಡಿಯಾಗಳನ್ನು ಮಾರ್ಕೆಟ್ ಮಾಡುವ ಸಂಸ್ಥೆಯೊಂದು ಪತ್ತೆ ಹಚ್ಚಿದೆ.
ಹೌದು ಇನ್ನು ಇನ್ ಸ್ಟಾಗ್ರಾಮ್ ಉಪಯೋಗಿಸುವವರು ಸ್ವಲ್ಪ ಎಚ್ಚರವಹಿಸುವುದು ಉತ್ತಮ. ಯಾಕೆಂದರೆ ನಿಮ್ಮ ಖಾತೆಯ ಮಾಹಿತಿಗಳು ಕೂಡಾ ಲೀಕ್ ಆಗುವ ಸಾಧ್ಯತೆಗಳು ಇವೆ. ಮುಂಬೈ ಮೂಲದ ಸೋಶಿಯಲ್ ಮೀಡಿಯಾಗಳನ್ನು ಮಾರ್ಕೆಟ್ ಮಾಡುವ ಸಂಸ್ಥೆ ಹೇಳುವ ವರದಿ ಪ್ರಕಾರ 4.9 ಕೋಟಿ ಜನರ ಇನ್ ಸ್ಟಾಗ್ರಾಮ್ ಖಾತೆಯ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ಇದರಲ್ಲಿ ಗಣ್ಯ ವ್ಯಕ್ತಿಗಳು, ಕೆಲ ಪ್ರಮುಖ ಹೋಟೆಲ್ ಹಾಗೂ ಪಾನೀಯ ಸಂಸ್ಥೆಗಳ ಖಾತೆಯೂ ಇದೆ ಎಂದು ಸಂಸ್ಥೆ ಹೇಳಿದೆ. ಇನ್ ಸ್ಟಾಗ್ರಾಮ್ ಫೇಸ್ ಬುಕ್ ಒಡೆತನದಲ್ಲಿದೆ. ಈ ವಿಚಾರದ ಬಗ್ಗೆ ನಾವು ತನಿಖೆ ನಡೆಸುತ್ತೇವೆ ಎಂದು ಫೇಸ್ ಬುಕ್ ಹೇಳಿದೆ.