ಬಾಗಲಕೋಟೆ,ಮೇ21(DaijiworldNews/AZM): :ದಿನಕ್ಕೆ ಸಾವಿರಾರು ಭಕಾಧಿಗಳು ಆಗಮಿಸುತ್ತಿರುವ ಬಸವಣ್ಣನವರ ಐಕ್ಯ ಮಂಟಪದ ಬಾವಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಭಕ್ತರಿಗೆ ತಾತ್ಕಾಲಿಕವಾಗಿ ಪ್ರವೇಶವನ್ನು ನಿಷೇಧಿಸಲಾಗಿದೆ.
1978 ರಲ್ಲಿ ನಿರ್ಮಾಣವಾದ ಐಕ್ಯ ಮಂಟಪದ ಬಾವಿ ಪ್ರವಾಸಿಗರನ್ನು ಅತಿ ಬೇಗ ಆಕರ್ಷಿಸುವಂತಿದೆ. ನದಿಯ ನಡುವೆ ಅತಿ ಸುಂದರವಾಗಿ ನಿರ್ಮಿಸಲಾಗಿರುವ ಈ ಬಾವಿಯೊಳಗೆ ದಿನಕ್ಕೆ ಅದೆಷ್ಟೋ ಭಕ್ತಾಧಿಗಳು ಇಳಿಯುತ್ತಿರುತ್ತಾರೆ. ಆದರೆ ಇದೀಗ ಮಂಟಪ ನಿರ್ವಹಣೆಯಲ್ಲಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಬಾವಿ ಅಪಾಯದ ಅಂಚಿಗೆ ತಲುಪಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ನೀಡಿರುವ ವರದಿ ಬಹಿರಂಗವಾಗಿದೆ. ಐಕ್ಯ ಮಂಟಪದಲ್ಲಿ ನೀರು ಬಸಿದು ಬಾವಿಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಇದನ್ನು ದುರಸ್ತಿಪಡಿಸಲು ಕ್ರಿಯಾಯೋಜನೆ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ.