ನವದೆಹಲಿ,ಮೇ 21 (Daijiworld News/MSP): ಉಡಾವಣೆಗೂ ಮುನ್ನ ದಿನವಾದ ಇಂದು ಮಂಗಳವಾರ, ಬಾಹ್ಯಾಕಾಶ ಸಂಶೋಧನ ಸಂಸ್ಥೆಯಾದ ಇಸ್ರೋದ ಅಧ್ಯಕ್ಷ ಕೆ ಶಿವನ್ ಪಿಎಸ್ಎಲ್ವಿ-ಸಿ-46 ಉಪಗ್ರಹದ ಪ್ರತಿಕೃತಿಯೊಂದಿಗೆ ತಿರುಪತಿ ತಿಮ್ಮಪ್ಪನ ಕ್ಷೇತ್ರಕ್ಕೆ ತೆರಳಿ ಅಲ್ಲಿ ಪಿಎಸ್ಎಲ್ವಿ-ಸಿ-46 ಉಪಗ್ರಹದ ಯಶಸ್ವಿ ಉಡಾವಣೆಗಾಗಿ ಪ್ರತಿಕೃತಿ ಪೂಜೆ-ಪ್ರಾರ್ಥನೆ ಸಲ್ಲಿಸಿದರು.
ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟದಿಂದ ಮೇ. 22 ರ ಬುಧವಾರ ಪಿಎಸ್ಎಲ್ವಿ-ಸಿ-46 ಉಪಗ್ರಹದ ಉಡಾವಣೆಯನ್ನು ಇಸ್ರೋ ಕೈಗೊಳ್ಳಲಿದೆ. ಪಿಎಸ್ಎಲ್ವಿ-ಸಿ46 ಮೂಲಕ ಭೂ ಪರಿವೀಕ್ಷಣೆಯ ರೇಡಾರ್ ಇಮೇಜಿಂಗ್ ಉಪಗ್ರಹ ಆರ್ಐಸ್ಯಾಟ್-2ಬಿ ಯನ್ನು ಬಾಹ್ಯಾಕಾಶಕ್ಕೆ ಇಸ್ರೋ ರವಾನಿಸಲಿದೆ.
ಉಪಗ್ರಹ ಉಡಾವಣೆಗೆ ಸೂಕ್ತ ಹವಾಮಾನವಿದ್ದರೆ ಬುಧವಾರ 5.27ರ ವೇಳೆಗೆ ಸತೀಶ್ ಧವನ್ ಬಾಹ್ಯಾಕೇಶ ಕೇಂದ್ರದಿಂದ ಉಪಗ್ರಹ ಉಡಾವಣೆಗೊಳ್ಳಲಿದೆ.