ಬೆಂಗಳೂರು,ಮೇ21(DaijiworldNews/AZM): ದ.ಭಾರತವನ್ನು ಉಗ್ರರ ತಂಡವೊಂದು ಟಾರ್ಗೆಟ್ ಮಾಡಿದೆ ಎಂಬು ಸುದ್ಧಿ ಹೊರಬಿದ್ದಿದ್ದು, ಸಾರ್ವಜನಿಕರಲ್ಲ್ಲಿ ಆತಂಕ ಸೃಷ್ಠಿಯಾಗಿದೆ. ಮೂವರು ಉಗ್ರರಿರುವ ತಂಡವೊಂದು ದಾಳಿ ನಡೆಸಲು ಸಿದ್ಧವಾಗಿದ್ದು ಈ ಬಗ್ಗೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಇಂಟರ್ನಲ್ ಸೆಕ್ಯುರಿಟಿ ಡಿವಿಷನ್ (ISD) ಸೂಚನೆ ನೀಡಿದೆ.
ಮೇ 10ರಂದು ಈ ಬಗ್ಗೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೂ ಫ್ಯಾಕ್ಸ್ ರವಾನೆ ಮಾಡಿರುವ ಇಂಟರ್ನಲ್ ಸೆಕ್ಯುರಿಟಿ ಡಿವಿಷನ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಅಬು ಅಲ್ಕಿತಾಲ್ ಎಂಬ ಉಗ್ರನ ನೇತೃತ್ವದಲ್ಲಿ @HAQUALJIHAD121 ಎಂಬ ಟೆಲಿಗ್ರಾಂ ಆ್ಯಪ್ ಅಕೌಂಟ್ ಮೂಲಕ ಮೂವರ ಉಗ್ರರ ಟೀಂ ಒಂದು ರಚಿತವಾಗಿದೆ. ಉಗ್ರರ ಈ ತಂಡ ದಕ್ಷಿಣ ಬಾರತದ ಹೈ ಕ್ಲಾಸ್ ಹೋಟೆಲ್ಸ್, ಬಾರ್ಸ್ ಅಂಡ್ ರೆಸ್ಟೋರೆಂಟ್, ಚರ್ಚ್ ಹಾಗೂ ದೇವಸ್ಥಾನಗಳನ್ನು ಟಾರ್ಗೆಟ್ ಮಾಡುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಜನಸಂದಣಿ ಇರುವ ಇಂಥ ಪ್ರದೇಶಗಳ ಮೇಲೆ ತೀವ್ರ ನಿಗಾ ವಹಿಸಿ. ಅಲ್ಲದೇ, ಸಂಬಂಧಿತ ಸ್ಥಳಗಳ ಮುಖ್ಯಸ್ಥರಿಗ ಭದ್ರತೆಯನ್ನು ಹೆಚ್ಚಿಸುವಂತೆ ಮತ್ತು ಚಿಕ್ಕಪುಟ್ಟ ಸಂಗತಿಗಳ ಮೇಲೂ ನಿಗಾವಹಿಸುವಂತೆ ತಿಳಿಸಿ. ಅಲ್ಲದೇ, ಭದ್ರತೆಗೆ ಸಂಬಂಧಿಸಿದಂತೆ ಗಸ್ತು ಪೊಲೀಸರೂ ಹೆಚ್ಚಿನ ನಿಗಾ ವಹಿಸುವಂತೆ ಎಚ್ಚರಿಸಿ ಎಂದು ಸೂಚನೆ ನೀಡಿದ್ದಾರೆ.
ಇನ್ನು ಇದೇ ಲೆಟರ್ ಪ್ರಕಾರ ಟೆಲಿಗ್ರಾಂ ಮೆಸೆಂಜರ್ ಆ್ಯಪ್ನಲ್ಲಿ ಉಗ್ರರು ಚರ್ಚೆ ನಡೆಸಿರೋದು ತನಿಖೆಯಿಂದ ಬೆಳಕಿಗೆ ಬಂದಿದೆ. ವಿಧ್ವಂಸಕ ಕೃತ್ಯ ಹೇಗೆ? ಎಲ್ಲಿ ಮಾಡಬೇಕು? ಎಂಬ ಕುರಿತು ಉಗ್ರರ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಿಗೆ ಮುನ್ನೆಚ್ಚರಿಕೆಯ ಸಂದೇಶ ರವಾನಿಸಲಾಗಿದೆ.