ಮುಂಬೈ, ಮೇ 21 (Daijiworld News/MSP): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಇಬ್ಬರೂ ಸೇರಿ ಬಹಳ ಕಷ್ಟಪಟ್ಟದ್ದಾರೆ. ಅವರು ಪಟ್ಟ ಶ್ರಮಕ್ಕೆ ಪ್ರತಿಫಲ ನಿಜಕ್ಕೂ ಸಿಗಲೇಬೇಕು. ಕನಿಷ್ಟ ಅವರಿಗೆ ಪ್ರತಿಪಕ್ಷ ಸ್ಥಾನವಾದರೂ ಸಿಗಲಿ ಎಂದು ವ್ಯಂಗ್ಯವಾಡಿದ ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಈ ರೀತಿಯಾಗಿ ಸಂಪಾದಕೀಯ ಬರೆದುಕೊಂಡಿದೆ.

ಚುನಾವಣೆ ಚುನಾವಣೋತ್ತರ ಸಮೀಕ್ಷೆಗಳನ್ನು ಯಾರು ಕೂಡಾ ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಡಿ. ಇದೆಲ್ಲವೂ ಗಾಳಿ ಸುದ್ದಿಯಾಗಿದ್ದು ನಂಬಿಕೆಗೆ ಅರ್ಹವಾಗಿಲ್ಲ. ಚುನಾವಣೋತ್ತರ ಸಮೀಕ್ಷೆ ನಮ್ಮ ನೈತಿಕ ಸ್ಥೈರ್ಯ ಕಸಿದುಕೊಳ್ಳುವುದಕ್ಕಾಗಿ ಮಾಡಲಾಗಿದೆ ಎಂಬುವುದು ತಿಳಿದಿರಲಿ ಎಂದು ಪ್ರಿಯಾಂಕಾ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರೆ, ಇತ್ತ ಶಿವಸೇನೆ ಮಾತ್ರ ಕಾಂಗ್ರೆಸ್ ನ ಕಾಳೆಲೆಯುತ್ತಿದೆ.
ಹಲವು ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳಿಗಿಂತ ನಮಗೆ ನಮ್ಮದೇ ಆದ ಸಮೀಕ್ಷೆ ಇದೆ. ಈ ಹಿಂದೆಯೇ 2019ರಲ್ಲಿಯೂ ಮೋದಿ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಂಪಾದಕೀಯದಲ್ಲಿ ಬರೆಯಲಾಗಿತ್ತು. ಹಾಗೆಯೇ ಆಗುತ್ತದೆ. ಇನ್ನು ಕಾಂಗ್ರೆಸ್ ನ ಇಬ್ಬರು ಮುಖಂಡರಾದ ರಾಹುಲ್, ಪ್ರಿಯಾಂಕಾ ಬಹಳಷ್ಟು ಶ್ರಮ ಪಟ್ಟಿದ್ದಾರೆ. ಅವರ ಶ್ರಮಕ್ಕೆ ಪ್ರತಿಫಲವಾಗಿ ಅವರಿಗೆ ಈ ಅವಕಾಶ ಸಿಗಲಿ . ಯಾಕೆಂದರೆ 2014ರಲ್ಲಿ ಕಾಂಗ್ರೆಸ್ಗೆ ಮಹುಮತ ಸಿಗದೆ ಪ್ರತಿಪಕ್ಷ ಸ್ಥಾನವನ್ನು ಕಳೆದುಕೊಂಡಿತ್ತು ಎಂದು ವ್ಯಂಗ್ಯವಾಗಿ ಸಂಪಾದಕೀಯ ಬರೆದುಕೊಂಡಿದೆ.