ಮುಂಬೈ,ಮೇ21(DaijiworldNews/AZM):ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬರುವ ಮುಂಚೆಯೇ ಇಲ್ಲೊಬ್ಬರು ಬಿಜೆಪಿ ಅಭ್ಯರ್ಥಿ ಸಾವಿರಾರು ಕೆ.ಜಿ. ಸ್ವೀಟ್ಸ್ ಗೆ ಆರ್ಡರ್ ಕೊಟ್ಟಿದ್ದಾರೆ.

ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಗೆಲ್ಲುವ ವಿಶ್ವಾಸದಲ್ಲಿದ್ದು, ಈಗಾಗಲೇ ಸಾವಿರಾರು ಕೆಜಿಯಷ್ಟು ಸ್ವೀಟ್ಸ್ಗೆ ಆರ್ಡರ್ ಕೊಟ್ಟಿದ್ದಾರೆ. ಈ ಹಿನ್ನೆಲೆ ಬೋರಿವಾಲಿಯ ಸ್ವೀಟ್ಸ್ ಅಂಗಡಿಯಲ್ಲಿ ಅವರಿಗಾಗಿ ಲಾಡು, ಪೇಡ ಸೇರಿದಂತೆ ವಿವಿಧ ರೀತಿಯ ಸ್ವೀಟ್ಸ್ ತಯಾರಿಸಲಾಗುತ್ತಿದೆ. ಇಲ್ಲಿನ ಸಿಬ್ಬಂದಿ ಮೋದಿ ಮುಖವಾಡಗಳನ್ನ ತೊಟ್ಟು ಸಿಹಿ ತಯಾರಿಕೆಯಲ್ಲಿ ತೊಡಗಿರೋದು ವಿಶೇಷವಾಗಿದೆ.
ಈ ಬಗ್ಗೆ ಮಾತನಾಡಿರೋ ಅಂಗಡಿ ಮಾಲೀಕ, ಬಿಜೆಪಿಯ ಗೋಪಾಲ್ ಶೆಟ್ಟಿ ಅವರಿಂದ 1500-2000 ಕೆಜಿ ಸ್ವೀಟ್ಸ್ಗೆ ಆರ್ಡರ್ ಬಂದಿದೆ. ನಮ್ಮ ಕೆಲಸಗಾರರು ಕೂಡ ಉತ್ಸಾಹದಲ್ಲಿದ್ದಾರೆ. ಹೀಗಾಗಿ ಮೋದಿ ಮಾಸ್ಕ್ ಧರಿಸಿ ಸಿಹಿ ತಯಾರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಗೋಪಾಲ್ ಶೆಟ್ಟಿ ವಿರುದ್ಧ ಕಾಂಗ್ರೆಸ್ನಿಂದ ಮಾಜಿ ನಟಿ ಉರ್ಮಿಳಾ ಮಾತೋಂಡ್ಕರ್ ಸ್ಪರ್ಧಿಸಿದ್ದಾರೆ.
ಮೇ.೨೩ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಎಕ್ಸಿಟ್ ಪೋಲ್ ಬಿಜೆಪಿ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿತ್ತು.