ನವದೆಹಲಿ,ಮೇ21(DaijiworldNews/AZM): ಲೋಕಸಭಾ ಚುನಾವಣೆ 2019ರ ಮತ ಎಣಿಕೆ ವೇಳೆ ಶೇ. 100ರಷ್ಟು ವಿವಿಪ್ಯಾಟ್ ಸ್ಲಿಪ್ಗಳನ್ನು ಪರಿಶೀಲನೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿದ್ದು, ಈ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಚೆನ್ನೈ ಮೂಲದ ‘ಟೆಕ್ ಫಾರ್ ಆಲ್’ ಸಂಸ್ಥೆ, ಮತ ಎಣಿಕೆ ವೇಳೆ ಶೇ. 100ರಷ್ಟು ವಿವಿಪ್ಯಾಟ್ ಸ್ಲಿಪ್ಗಳನ್ನು ಪರಿಶೀಲನೆ ಮಾಡಬೇಕೆಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಅರುಣ್ ಮಿಶ್ರಾ, ‘ಇದೊಂದು ನಾನ್ ಸೆನ್ಸ್, ಈ ಮೊದಲು, ಶೇ. 50 ರಷ್ಟು ವಿವಿ ಪ್ಯಾಟ್ ಸ್ಲಿಪ್ ಪರಿಶೀಲನೆ ಬಗ್ಗೆ ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳೇ ವಜಾ ಮಾಡಿದ್ರು. ಹೀಗಿದ್ರೂ ಮತ್ತೆ ಅರ್ಜಿ ಸಲ್ಲಿಸಿದ್ದೀರಲ್ಲಾ ಅಂತಾ ಜಸ್ಟೀಸ್ ಅರುಣ್ ಮಿಶ್ರಾ ಅರ್ಜಿದಾರರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶ ಮೇ 23ರಂದು ಹೊರ ಬೀಳಲಿದೆ.