ಯಾದಗಿರಿ, ಆ.03(DaijiworldNews/AA): 'ನನ್ನ ಪತಿಗೆ ಯಾದಗಿರಿ ಶಾಸಕ ಹಾಗೂ ಶಾಸಕರ ಪುತ್ರ ಕೊಟ್ಟ ದುಡ್ಡಿಗಾಗಿ ಕಿರುಕುಳ ನೀಡುತ್ತಿದ್ದರು. ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್ ಮುಂದುವರೆಸಲು ಹೆಚ್ಚು ದುಡ್ಡು ಕೇಳಿದ್ದರು. ದುಡ್ಡು ಕೊಡಲಿಲ್ಲ ಎಂದು ಪೋಸ್ಟಿಂಗ್ ಕೊಡಲಿಲ್ಲ ಎಂದು ಮೃತ ಪಿಎಸ್ಐ ಪತ್ನಿ ಶ್ವೇತ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಯಾದಗಿರಿ ಸೈಬರ್ ಕ್ರೈಮ್ ಠಾಣೆಯ ಪಿಎಸ್ಐ ಪರಶುರಾಮ ಅವರು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಮಾತನಾಡಿದ ಅವರ ಪತ್ನಿ ಶ್ವೇತ, ಯಾರು ದುಡ್ಡು ಜಾಸ್ತಿ ಕೊಟ್ಟಿದ್ದಾರೆ ಅದಕ್ಕೆ ಅವರಿಗೆ ಪೋಸ್ಟಿಂಗ್ ಕೊಟ್ಟಿದ್ದಾರೆ. ಬರಿ ದುಡ್ಡು ದುಡ್ಡು ಎಂದು ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಪುತ್ರ ಪಂಪಣ್ಣಗೌಡ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದರು.
ಮೂಲತ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ನಿವಾಸಿಯಾಗಿದ್ದ ಪಿಎಸ್ಐ ಪರಶುರಾಮ, ಯಾದಗಿರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ, ಅವರ ಸಾವಿಗೆ ಯಾದಗಿರಿ ಶಾಸಕ ಮತ್ತು ಅವರ ಪುತ್ರನೇ ಕಾರಣ ಎಂದು ಇದೀಗ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ಈ ಹಿನ್ನಲೆ ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬAಧಿಸಿದAತೆ ಈ ಕೇಸ್ ನ್ನು ಸಿಐಡಿ ತನಿಖೆಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ.