ನವದೆಹಲಿ, ಮೇ21(Daijiworld News/SS): ಭಾರತದ ಬೋಟ್ಗಳು ಚೇಸ್ ಮಾಡಿ ಪಾಕ್ ಹಡಗನ್ನು ತಡೆದು, ಹಡಗಿನಲ್ಲಿ ಸಾಗಿಸುತ್ತಿದ್ದ 500 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದೆ.

ಭಾರತದ ಕೋಸ್ಟ್ ಗಾರ್ಡ್'ಗೆ ಪಾಕಿಸ್ತಾನದ ಅಲ್ ಮದಿನಾ ಹೆಸರಿನ ಹಡಗು ಗುಜರಾತಿನ ಜಾಕೌ ಕರವಾಳಿಯ ಭಾಗದಲ್ಲಿ ಮಾದಕ ವಸ್ತುಗಳನ್ನು ರಫ್ತು ಮಾಡಲು ಬಂದು ನಿಂತಿದೆ ಎಂದು ಗುಪ್ತಚರ ಇಲಾಖೆ ಖಚಿತ ಮಾಹಿತಿ ನೀಡಿತ್ತು. ಈ ಮಾಹಿತಿಯ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಪಾಕ್ ಹಡಗನ್ನು ಜಪ್ತಿ ಮಾಡಲು ಎರಡು ವೇಗದ ಬೋಟ್ನೊಂದಿಗೆ ಸಮುದ್ರಕ್ಕೆ ಇಳಿದಿದೆ. ಮಾತ್ರವಲ್ಲ, ಭಾರತದ ಬೋಟ್ಗಳು ಚೇಸ್ ಮಾಡಿ ಪಾಕ್ ಹಡಗನ್ನು ತಡೆದು ನಿಲ್ಲಿಸಿದೆ.
ಪಾಕ್ ಹಡಗನ್ನು ತಡೆದು ನಿಲ್ಲಿಸಿದ ವೇಳೆ ಪಾಕ್ ಹಡಗಿನಲ್ಲಿದ್ದ ವ್ಯಕ್ತಿಗಳು ಕೆಲವು ಚೀಲಗಳನ್ನು ಸಮುದ್ರಕ್ಕೆ ಎಸೆದಿದ್ದಾರೆ. ಸಮುದ್ರಕ್ಕೆ ಎಸೆದಿದ್ದ 7 ಚೀಲಗಳನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಹೊರ ತೆಗೆದು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತುಗಳೆಂದು ತಿಳಿದುಬಂದಿದೆ.
ವಶಪಡಿಸಿಕೊಂಡ ಮಾದಕ ವಸ್ತುಗಳ ಸುಮಾರು 400 ರಿಂದ 500 ಕೋಟಿ ಬೆಲೆ ಎಂದು ಅಂದಾಜಿಸಲಾಗಿದೆ. ಹಡಗಿನಲ್ಲಿದ್ದ ವ್ಯಕ್ತಿಗಳನ್ನು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.