ನವದೆಹಲಿ, ಆ 8(DaijiworldNews/MS): ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿಯು ಸತತ ೯ನೇ ಬಾರಿಯೂ ರೆಪೋ (Repo Rate) ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ. ಗುರುವಾರ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಟಿ ನಡೆಸಿ ಈ ಮಾಹಿತಿಯನ್ನು ನೀಡಿದ್ದಾರೆ.
ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ್ದು, ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ತರದಿರಲು ನಿರ್ಧಾರ ಮಾಡಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರಲ್ಲಿ 5:1 ರಷ್ಟು ಈ ಸದಸ್ಯರು ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಜೂನ್ ತಿಂಗಳಿನಲ್ಲಿ ನಡೆದ ತನ್ನ ಹಿಂದಿನ ಸಭೆಯಲ್ಲಿಯೂ ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿರಲಿಲ್ಲ.
ದೇಶದಾದ್ಯಂತ ಕೋವಿಡ್ ಸಾಂಕ್ರಾಮಿಕ ರೋಗವು ಇಡೀ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದಾಗ ಆರ್ಬಿಐ ಕೊನೆಯದಾಗಿ ಮೇ 2020 ರಲ್ಲಿ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್ಗಳಿಂದ ಶೇಕಡಾ 4 ಕ್ಕೆ ಕಡಿತಗೊಳಿಸಿತ್ತು, ಇದು ಬೇಡಿಕೆಯಲ್ಲಿ ನಿಧಾನಗತಿ, ಉತ್ಪಾದನೆ ಕಡಿತ ಮತ್ತು ಉದ್ಯೋಗ ನಷ್ಟಕ್ಕೆ ಕಾರಣವಾಯಿತು. ಅಂದಿನಿಂದ, ಸಾಂಕ್ರಾಮಿಕ ರೋಗ ಕಡಿಮೆಯಾದ ನಂತರ ಹೆಚ್ಚಿನ ಹಣದುಬ್ಬರ ಮಟ್ಟವನ್ನು ನಿಭಾಯಿಸಲು ಆರ್ಬಿಐ ರೆಪೊ ದರವನ್ನು 250 ಪಾಯಿಂಟ್ಗಳಿಂದ 6.50 ಪ್ರತಿಶತಕ್ಕೆ ಹೆಚ್ಚಿಸಿದೆ.
ಮುಂಬರುವ ಹಣಕಾಸು ನೀತಿ ಸಮಿತಿ (MPC) ಸಭೆಗಳಲ್ಲಿ ಭವಿಷ್ಯದ ರೆಪೋ ದರ ಕಡಿತ ಮಾಡುವ ನಿರೀ್ಕ್ಷೆ ಇದೆ.