ನವದೆಹಲಿ, ಆ.08(DaijiworldNews/AK): ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಮಂಡಳಿ ಕಾರ್ಯ ವೈಖರಿಯಲ್ಲಿ ಪಾರದರ್ಶಕತೆ ತರುವ ಉದ್ದೇಶವನ್ನು ಒಳಗೊಂಡಿದೆಯೇ ಹೊರತು ಇದು ಮಸೀದಿಗಳ ಚಟುವಟಿಕೆಗಳಲ್ಲಿ ಮಧ್ಯಪ್ರವೇ ಶಿಸುವ ಪ್ರಯತ್ನವಲ್ಲ ಎಂದು ಕೇಂದ್ರ ಸಚಿವ ರಾಜೀ ವ್ ರಂಜನ್ ಸಿಂಗ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಸೂದೆ ಮಂಡನೆಯ ಬಗ್ಗೆ ವಿಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಈ ಕುರಿತು ಜೆಡಿಯು ನಾಯಕ ರಾಜೀವ್ ಸ್ಪಷ್ಟನೆ ನೀಡಿದರು. ಜೆಡಿಯು ಸಹ ಇಲ್ಲಿ ಒಂದು ಪಕ್ಷ. ಆಡಳಿತ ಪಕ್ಷವಾಗಿರಲಿ ಅಥವಾ ವಿರೋ ಧ ಪಕ್ಷವಾಗಿರಲಿ. ನನ್ನ ಹೇಳಿಕೆಯನ್ನು ನಾನು ಇಲ್ಲಿ ದಾಖಲಿಸಲೇ ಬೇಕಿದೆ ಎಂದು ಹೇಳಿದರು.
ಮಸೂದೆಯನ್ನು ಸಮರ್ಥಿಸಿಕೊಂಡ ಅವರು, ಸದನದ ಹಲವು ಸದಸ್ಯರು ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂ ವಿರೋಧಿಯಾಗಿದೆ ಎಂದು ಹೇಳುತ್ತಿದ್ದಾರೆ. ಅದು ಹೇಗೆ ಮುಸ್ಲಿಂ ವಿರೋಧಿ ಎಂಬುದನ್ನು ವಿವರಿಸಿ ಎಂದು ಮರು ಪ್ರಶ್ನೆ ಹಾಕಿದರು. ಇದರ ಮೂಲಕ ವಕ್ಫ್ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶ ಹೊಂದಲಾಗಿದೆಯೇ ಹೊರತು ಮಸೀದಿಗಳ ಚಟುವಟಿಕೆಯಲ್ಲಿ ಮೂಗು ತೂರಿಸುವುದಲ್ಲ ಎಂದಿದ್ದಾರೆ.
ವಕ್ಫ್ ಮಂಡಳಿಯನ್ನು ಹೇಗೆ ರಚಿಸಲಾಗಿದೆ? ಕಾನೂನು ಮೂಲಕವೇ ಅದರ ರಚನೆಯಾಗಿದೆ.ಯಾವುದೇ ಒಂದು ಸಂಸ್ಥೆ ಕಾನೂನಿನ ಮೂಲಕ ರಚನೆಯಾಗಿದ್ದಾಗ ಸರ್ವಾಧಿಕಾರವಾಗಲು ಹೇಗೆ ಸಾಧ್ಯ. ಪಾರದರ್ಶಕತೆ ಖಚಿತಪಡಿಸುವ ಉದ್ದೇಶದಿಂದ ಕಾನೂನು ಮಾಡುವ ಅಧಿಕಾರ ಸರ್ಕಾರಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.