ಹರಿಕೋಟ, ಮೇ 22 (Daijiworld News/MSP): ದೇಶದ ರಕ್ಷಣಾ ಕ್ಷೇತ್ರದಲ್ಲಿ ಹೆಮ್ಮೆಯ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ದೇಶದ ಭದ್ರತೆಗೆ ಮತ್ತಷ್ಟು ಶಕ್ತಿ ತುಂಬುವ, ಗಡಿಯಲ್ಲಿ ಉಗ್ರರ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ಇಡುವ ರೇಡಾರ್ ಇಮೇಜಿಂಗ್ ಪರಿವೀಕ್ಷಕ ಉಪಗ್ರಹ ರಿಸ್ಯಾಟ್-2ಬಿಯನ್ನು ಉಪಗ್ರಹ ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಬುಧವಾರ ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನಡೆಸಿದ, ಪಿಎಸ್ಎಲ್ವಿ ಸಿ 46 ಉಪಗ್ರಹ ರಿಸ್ಯಾಟ್-2ಬಿ ಹೊತ್ತ ಉಡಾವಣೆಯಾಗಿದ್ದು ಯಶಸ್ವಿಯಾಗಿ ಕಕ್ಷೆ ಸೇರಿದೆ.
ನಸುಕಿನ 5.30ರ ವೇಳೆಗೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಬಾಹ್ಯಾಕೇಶ ಕೇಂದ್ರದಿಂದ ಉಡಾವಣೆಯನ್ನು ನಡೆಸಲಾಗಿದೆ. ಇದು ಕೃಷಿ, ಅರಣ್ಯ ಪ್ರದೇಶ ಸಂರಕ್ಷಣೆ, ನೈಸರ್ಗಿಕ ವಿಕೋಪ ನಿರ್ವಹಣೆ, ಹಾಗೂ ಉಗ್ರರ ಕಾರ್ಯ ಚಟುವಟಿಕೆ ಮೇಲೆ ಕಣ್ಗಾವಲು ಸೇರಿದಂತೆ ರಿಸ್ಯಾಟ್ ಸಹಕಾರಿಯಾಗಲಿದೆ.
615 ಕೆಜಿ ತೂಕದ ರಿಸ್ಯಾಟ್ 2 ಬಿ ಉಪಗ್ರಹ ಭೂಮಿಯಿಂದ 557 ಕಿ.ಮೀ ಎತ್ತರದಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಇನ್ನು ಉಡಾವಣೆಯಾದ 15 ನಿಮಿಷಗಳಲ್ಲಿ ರಿಸ್ಯಾಟ್-2ಬಿ ಉಪಗ್ರಹವು ಕಕ್ಷೆ ಸೇರಿದೆ. ಮಿಷನ್ ಅತ್ಯುತ್ತಮ ಯಶಸ್ಸು ಪಡೆದಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.