ನವದೆಹಲಿ, ಮೇ 22 (Daijiworld News/MSP): ಟಿಕ್ ಟಾಕ್ ಆಪ್ ಮೂಲಕ ಖ್ಯಾತಿ ಹೊಂದಿದ್ದ 27 ವರ್ಷದ ಜಿಮ್ ತರಬೇತುದಾರ ಮೋಹಿತ್ ಮೋರ್ ಎಂಬಾತ ಮೇಲೆ ದುಷ್ಕರ್ಮಿಗಳು ಗುಂಡಿನ ಮಳೆಗೆರೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಮಂಗಳವಾರ ಸಂಜೆ 5.15 ರ ವೇಳೆಗೆ ಘಟನೆ ನಡೆದಿದ್ದು, ಮೋಹಿತ್ ತನ್ನ ಸ್ನೇಹಿತನ ಅಂಗಡಿಯಲ್ಲಿ ಕುಳಿತು ಹರಟುತ್ತಿದ್ದ ಆತನ ಮೇಲೆ ದಾಳಿ ನಡೆಸಿದ ಮೂವರು ದುಷ್ಕರ್ಮಿಗಳು ಗುಂಡಿನ ಮಳೆಗೈದಿದ್ದಾರೆ. ಈ ಭೀಕರ ದಾಳಿಯ ಹೇಗಿತ್ತು ಎಂದರೆ ಒಟ್ಟು ಹದಿಮೂರು ಸುತ್ತು ಗುಂಡು ಹಾರಿಸಿಸಲಾಗಿತ್ತು. ಇದರಲ್ಲಿ ಏಳು ಗುಂಡು ಮೋಹಿತ್ ಅವರಿಗೆ ತಗುಲಿದ್ದು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೋಹಿತ್ ಮೋರ್ ಟಿಕ್ ಟಾಕ್ನಲ್ಲಿ 5.17 ಲಕ್ಷಕ್ಕೆ ಲಕ್ಷ ಚಂದಾದಾರನ್ನು ಹೊಂದುವ ಮೂಲಕ ಖ್ಯಾತಿ ಪಡೆದಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದು ಅವರ ಸಾಮಾಜಿಕ ಜಾಲತಾಣಗಳ ಬಗ್ಗೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮೂವರು ಶಂಕಿತ ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದ ದಾಳಿ ನಡೆಸಿದ್ದಾರೆ. ಅವರ ಕೆಲವು ಚಲನವಲನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಾಮಾಜಿಕ ಜಾಲತಾಣದ ಮೂಲಕ ಯಾರದರೂ ವೈರತ್ವ ಸಾಧಿಸಿರುವ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.