ದೆಹಲಿ, ಆ.13(DaijiworldNews/AA): ಕೆಲವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಆದರೆ ಕೆಲವರು ಎರಡು ಮೂರು ಪ್ರಯತ್ನಗಳ ಬಳಿಕ ಉತ್ತೀರ್ಣರಾಗುತ್ತಾರೆ. ಹೀಗೆ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ಉತ್ತೀರ್ಣರಾದ ಮನೀಶಾ ಧರ್ವೆ ಅವರ ಯಶೋಗಾಥೆ ಇದು.
ಮನೀಶಾ ಧರ್ವೆ ಅವರು ಖಾರ್ಗೋನ್ನ ಝಿರ್ನಿಯಾ ಬ್ಲಾಕ್ನ ಬೊಂಡಾರ್ನ್ಯಾ ಗ್ರಾಮದವರು. ಅವರ ಜಮ್ನಾ ಧರ್ವೆ. ವೃತ್ತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕಿ. ಮನೀಶಾ ಅವರ ತಂದೆ ಗಂಗಾರಾಮ್ ಧರ್ವೆ. ವೃತ್ತಿಯಲ್ಲಿ ಇಂಜಿನಿಯರ್ ಆದ ಅವರು ಸ್ಥಳೀಯ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ದೊಡ್ಡ ನಗರಕ್ಕಿಂತ ಹೆಚ್ಚಾಗಿ ಹಳ್ಳಿಯಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಮನೀಶಾ ಎಂಟನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಮತ್ತು ಹತ್ತು ಮತ್ತು ಹನ್ನೆರಡನೇ ತರಗತಿಗಳಿಗೆ ಖಾರ್ಗೋಣೆ ಶಾಲೆಗಳಲ್ಲಿ ಶಿಕ್ಷಣವನ್ನು ಮುಗಿಸಿದಳು. ಮನೀಶಾ ಹತ್ತನೇ ತರಗತಿಯ ಪರೀಕ್ಷೆಯಲ್ಲಿ 75% ಮತ್ತು ಹನ್ನೆರಡನೆ ತರಗತಿ ಪರೀಕ್ಷೆಯಲ್ಲಿ 78% ಪಡೆಯುತ್ತಾರೆ. ಬಳಿಕ ಇಂದೋರ್ನ ಹೋಳ್ಕರ್ ಕಾಲೇಜಿನಲ್ಲಿ ಬಿ.ಎಸ್ಸಿ. ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಗಳಿಸುತ್ತಾರೆ.
ನಂತರ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿದ್ದ ಮನೀಶಾ ಅವರು, ಪದವಿ ಪಡೆದ ನಂತರ ಯುಪಿಎಸ್ಸಿ ಪರೀಕ್ಷೆಗೆ ಓದಲು ನಿರ್ಧರಿಸಿದಳು. ಅದಕ್ಕಾಗಿ ದೆಹಲಿಗೆ ಪ್ರಯಾಣ ಬೆಳೆಸುತ್ತಾರೆ. ಮೊದಲ ಪ್ರಯತ್ನದಲ್ಲಿ ಅವರು ವಿಫಲರಾಗುತ್ತಾರೆ. ಹೀಗೆ ತನ್ನ ಎರಡನೇ ಹಾಗೂ ಮೂರನೇ ಪ್ರಯತ್ನದಲ್ಲೂ ವಿಫಲರಾಗುತ್ತಾರೆ. ಇದರಿಂದಾಗಿ ದೃತಿಗೆಡದ ಅವರು ತಮ್ಮ 2023ರಲ್ಲಿ ನಾಲ್ಕನೇ ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು, 257 ರ್ಯಾಂಕ್ ಗಳಿಸುವ ಮೂಲಕ ಉತ್ತೀರ್ಣರಾಗುತ್ತಾರೆ. ಈ ಮೂಲಕ ಕೇವಲ 23ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾಗುತ್ತಾರೆ.