ತುಮಕೂರು,22(DaijiworldNews/AZM):ದೇವಾಲಯದಲ್ಲಿ ಹರಿಸೇವೆ ಪ್ರಸಾದ ಸೇವಿಸಿ ಬಾಲಕನೋರ್ವ ಮೃತಪಟ್ಟು ಇಪ್ಪತ್ತಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಪಾವಗಡ ನಿಡಗಲ್ಲು ವೀರಭದ್ರಸ್ವಾಮಿ ದೇವಾಲಯದಲ್ಲಿ ನಡೆದಿದೆ.
ಸಾವನ್ನಪ್ಪಿರುವ ಬಾಲಕನನ್ನು ವೀರಭದ್ರ (11) ಎಂದು ಗುರುತಿಸಲಾಗಿದೆ. ಪ್ರಸಾದ ಸೇವಿಸಿದ ಕೆಲವೇ ಹೊತ್ತಲ್ಲಿ ಆತ ಅಸ್ವಸ್ಥನಾಗಿದ್ದಾನೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ ಎಂದು ಮಾದ್ಯಮಗಳಲ್ಲಿ ವರದಿಯಾಗಿದೆ.
ಸೋಮವಾರ ಸಿರಾ ಮೂಲದ ಕೆಲ ಭಕ್ತರು ವೀರಭದ್ರಸ್ವಾಮಿ ದೇವಾಲಯಕ್ಕೆ ತೆರಳಿದ್ದರು. ಆ ವೇಳೆ ದೇವಾಲಯದಲ್ಲಿ ಅಡಿಗೆಗೆ ನೀರಿಲ್ಲದಿದ್ದ ಕಾರಣ ತೊಟ್ಟಿ ನೀರನ್ನೇ ಬಳಸಿ ಪ್ರಸಾದ ತಯಾರಿಸಲಾಗಿತ್ತು. ಹೀಗೆ ತೊಟ್ಟಿ ನೀರಿನ ಬಳಕೆ ಆಡಿದ್ದ ಪ್ರಸಾದ ತಿಂದು ಬಹುತೇಕ ಜನರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಸಧ್ಯ ಅಸ್ವಸ್ಥರಾದ ಭಕ್ತರನ್ನು ಸಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.
ಸುಳ್ವಾಡಿ ಮಾರಮ್ಮದೇವಸ್ಥಾನ, ಚಿಂತಾಮಣಿ ಗಂಗಮ್ಮ ದೇವಾಲಯ ವಿಷ ಪ್ರಸಾದ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೊಂದು ಪ್ರಕರಣ ನಡೆದಿದೆ.