ಬೆಂಗಳೂರು, ಆ.13 (DaijiworldNews/TA) : ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹಾಗು ಸ್ಪೀಕರ್ ಯು.ಟಿ ಖಾದರ್ ಇಬ್ಬರ ಮಾತುಕತೆ ಚರ್ಚೆಯಾಗುತ್ತಿರುವುದು ಇದೀಗ ಸರಾಗವಾಗಿದೆ. ಮತ್ತೆ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸದನದಲ್ಲಿ ಇತ್ತೀಚಿಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ವಿಪಕ್ಷ ನಾಯಕರು ಬಳಸಿದ ಪದಕ್ಕೆ ಶಾಸಕ ಪ್ರದೀಪ್ ಈಶ್ವರ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಅಂತಹ ಪದಗಳನ್ನು ಹೊಸ ಶಾಸಕರ ವಿರುದ್ಧ ಬಳಸಬಾರದು. ಅಂತಹ ಪದಗಳು ನನಗೆ ಸೂಕ್ತವಲ್ಲ ಎಂದು ಹೇಳಿದ್ದರು. ಈ ರೀತಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ ಶಾಸಕರ ಮತ್ತೊಂದು ಮಾತು ಈಗ ವೈರಲ್ ಆಗಿದೆ.
ಶಾಸಕ ಪ್ರದೀಪ್ ಈಶ್ವರ್ ಹಾಗು ವಿಪಕ್ಷ ನಾಯಕ ಆರ್. ಅಶೋಕ್ ನಡುವಿನ ಚರ್ಚೆಯ ವೇಳೆ ಸ್ಪೀಕರ್ ಯು.ಟಿ ಖಾದರ್ ಪ್ರದೀಪ್ ಈಶ್ವರ್ ಅವರಿಗೆ ಕುಳಿತುಕೊಳ್ಳುವಂತೆ ಹೇಳಿದ್ದರು. ಈ ವೇಳೆ ಪ್ರದೀಪ್ ಈಶ್ವರ್ ನೀಡಿರುವ ಹೇಳಿಕೆ ಭಾರೀ ವೈರಲ್ ಆಗಿದೆ. ನನಗೆ ಪ್ರತಿ ಪಕ್ಷದವರು ಬೈದಿದ್ದಕ್ಕಿಂತ ಸ್ಪೀಕರ್ ಬೈದಿದ್ದೇ ಹೆಚ್ಚು ಎಂದು ಹೇಳಿದರು. ಈ ವೀಡಿಯೋ ಸದ್ಯ ವೈರಲ್ ಆಗಿದೆ.