ನವದೆಹಲಿ,ಆ.14(DaijiworldNews/AK): ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ ಮತ್ತೆ ಭಾರತದ ಮೂರು ಪ್ರದೇಶಗಳು ಸೇರ್ಪಡೆಯಾಗಿವೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಬುಧವಾರ ಈ ವಿಷಯ ತಿಳಿಸಿದರು.
ತಮಿಳುನಾಡಿನ ನಂಜರಾಯನ್ ಪಕ್ಷಿಧಾಮ, ಕಾಜುವೇಲಿ ಪಕ್ಷಿಧಾಮ ಹಾಗೂ ಮಧ್ಯಪ್ರದೇಶದ ತಾವಾ ಸಂರಕ್ಷಿತ ಪ್ರದೇಶವನ್ನು ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ ಸೇ ರ್ಪಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈಮೂಲಕ ಭಾರತದಲ್ಲಿ 85 ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿ ಪ್ರದೇಶಗಳಿವೆ ಎಂದು ಅವರು ತಿಳಿಸಿದರು.
ಭಾರತದಲ್ಲಿ 10.36 ಲಕ್ಷ ಹೆಕ್ಟರ್ ವ್ಯಾಪ್ತಿಯ ರಾಮ್ಸರ್ ಜೌಗುಭೂಮಿ ಇದೆ. ಭಾರತದಲ್ಲಿ ತಮಿಳುನಾಡು (18) ಅತಿ ಹೆಚ್ಚು ಜೌಗುಭೂಮಿಗಳನ್ನು ಹೊಂದಿದ್ದು ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ ಇದೆ.
ಕೇಂ ದ್ರ ಸರ್ಕಾರದ ಹಲವಾರು ಪರಿಸರ ಸ್ನೇ ಹಿ ಕ್ರಮಗಳಿಂದ ಭಾರತದಲ್ಲಿ 2014ರಿಂದ 2024ರ ಹತ್ತು ವರ್ಷ ಗಳ ಅವಧಿಯಲ್ಲಿ 41 ರಾಮ್ಸರ್ಮಾನ್ಯತೆಯ ಜೌಗುಭೂಮಿಗಳನ್ನು ಗುರುತಿಸಲಾಗಿದೆ. ಮೊದಲು ಇವುಗಳ ಸಂಖ್ಯೆ ಕೇವಲ 25 ಇತ್ತು ಎಂದು ಯಾದವ್ ತಿಳಿಸಿದರು.