ಬೆಂಗಳೂರು,ಆ.15 (DaijiworldNews/TA): ಗ್ಯಾರಂಟಿಗಳ ವಿಚಾರವಾಗಿ ಸರ್ಕಾರ ವಿಭಿನ್ನ ಯೋಜನೆ ಹಾಕಿಕೊಂಡಿದೆ. ಬಿಪಿಎಲ್ ಕಾರ್ಡಿಗೆ ಕೆಲವೊಂದು ಷರತ್ತು ಹಾಕುವ ಮೂಲಕ 25,000 ಕೋಟಿ ರೂ. ಉಳಿತಾಯಕ್ಕೆ ಸರ್ಕಾರ ಯೋಜನೆ ಹಾಕಿದಂತಿದೆ. ಅಕ್ಟೋಬರ್ ಹೊತ್ತಿಗೆ ಆಪರೇಷನ್ ಬಿಪಿಎಲ್ ಕಾರ್ಡ್ಗೆ ಚಾಲನೆ ಕೊಡಿ ಎಂಬುವುದಾಗಿದೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ಗಳ ಪರಿಶೀಲನೆ ನಡೆದರೆ ಅನರ್ಹ ಫಲಾನುಭವಿಗಳು ಪತ್ತೆಯಾಗುತ್ತಾರೆ ಎಂಬುವುದು ಯೋಜನೆಯಾಗಿದೆ. ಈ ರೀತಿ ಪರಿಶೀಲನೆ ನಡೆಸುವುದರಿಂದ ಅನರ್ಹರು ಸಹಜವಾಗಿಯೇ ಗ್ಯಾರಂಟಿ ಯೋಜನೆಗಳಿಂದ ಹೊರಗುಳಿಯಬೇಕಾಗುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿದೆ.
ಯಾರ ಕಾರ್ಡ್ ರದ್ದಾಗುವ ಸಾಧ್ಯತೆ ಇರುತ್ತದೆ..?:
ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದಲ್ಲಿ, ವೈಟ್ ಬೋರ್ಡ್ 4 ಚಕ್ರದ ವಾಹನ ಇದ್ದು ಬಿಪಿಎಲ್ ಕಾರ್ಡ್ ಮಾಡಿಸಿದವರ ಕಾರ್ಡ್ ರದ್ದಾಗಲಿದೆ, ಮತ್ತು ಇನ್ನೊಂದೆರಡು ಶರತ್ತಿನ ಯೋಜನೆ ಇದೆ ಎನ್ನಲಾಗಿದೆ.