ನವದೆಹಲಿ,ಮೇ23(DaijiWorldNews/AZM):ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಮುಂದಿನ 5 ವರ್ಷ ದೇಶವನ್ನು ಮುನ್ನಡೆಸುವವರು ಯಾರು ಅನ್ನೋ ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ. ಈ ಹಿನ್ನಲೆ ಲೋಕಸಭಾ ಚುನಾವಣೆಯ ಟ್ರೆಂಡ್ಸ್ ಮತ್ತು ಫಲಿತಾಂಶಗಳಿಗಾಗಿ ಚುನಾವಣಾ ಆಯೋಗ ಮೊಬೈಲ್ ಅಪ್ಲಿಕೇಶನ್ ಮತ್ತು ಮತದಾರರ ಸಹಾಯವಾಣಿ ಅನ್ನು ಪರಿಚಯಿಸಿದೆ.
ಈ ಅಪ್ಲಿಕೇಶನ್ ಜನವರಿ 2019 ರಲ್ಲಿ ಪ್ರಾರಂಭವಾಯಿತು. Android ಮತ್ತು iPhone ಬಳಕೆದಾರರಿಗೆ ಮತದಾರ ಸಹಾಯವಾಣಿ ಅಪ್ಲಿಕೇಶನ್ ಲಭ್ಯವಿರುತ್ತದೆ.5 ದಶಲಕ್ಷ ಜನರು ಈ ವರೆಗೆ ಈ ಆಪ್ ಅನ್ನು ಡೌನ್ಲೋಡ್ ಮಾಡಿದ್ದು, ಒಂದು ಲಕ್ಷ ಜನರು ಮತದಾರರ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದಾರೆ. ವೋಟರ್ ಹೆಲ್ಪ್ ಲೈನ್ ಆಪ್ ನಲ್ಲಿ ಎಲ್ಲಾ ಅಭ್ಯರ್ಥಿಗಳ ವಿವರಗಳು ತೆಗೆದುಕೊಳ್ಳಬಹುದು. 2009 ಮತ್ತು 2014 ರ ಲೋಕಸಭಾ ಚುನಾವಣೆಗಳ ವಿವರಗಳನ್ನು ಕೂಡಾ ಅಪ್ಲಿಕೇಶನ್ನಿಂದ ಪಡೆಯಬಹುದಾಗಿದೆ.
ಮತದಾರರ ಸಹಾಯವಾಣಿ ಅಪ್ಲಿಕೇಶನ್(Voter Helpline App) ಚುನಾವಣಾ ಆಯೋಗದ ವೆಬ್ಸೈಟ್ ನಲ್ಲಿ ಟ್ರೆಂಡ್ ಗಳು ಮತ್ತು ಫಲಿತಾಂಶಗಳು ಸಹ ಲಭ್ಯವಿರುತ್ತವೆ. ಬೆಳಿಗ್ಗೆ 8 ಗಂಟೆಯ ನಂತರ ಮತ ಎಣಿಕೆಯ ಮಾಹಿತಿ ಪ್ರಾರಂಭವಾಗುತ್ತದೆ ಮತ್ತು ನಿರಂತರ ನವೀಕರಣಗಳನ್ನು ಸ್ವೀಕರಿಸಲಾಗುತ್ತದೆ. ನಿಮ್ಮ ಮೆಚ್ಚಿನ ಅಭ್ಯರ್ಥಿಯನ್ನು ನೀವು ಬುಕ್ಮಾರ್ಕ್ ಮಾಡಬಹುದು, ನಂತರ ಅವರ ಫಲಿತಾಂಶಗಳನ್ನು ಪತ್ತೆಹಚ್ಚಬಹುದು.
ದೇಶದ 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಈ ಬಾರಿ ಘಟಾನುಘಟಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಇವರೆಲ್ಲರ ಭವಿಷ್ಯ ಇಂದು ನಿರ್ಧಾರವಾಗಲಿದೆ.