ಬೆಂಗಳೂರು, ಮೇ23(Daijiworld News/SS): ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿದ ಪ್ರಕಾಶ್ ರಾಜ್ಗೆ ಸೋಲು ಬಹುತೇಕ ಖಚಿತವಾಗಿದ್ದು, ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಭಾರಿ ಮುನ್ನಡೆ ಪಡೆದುಕೊಂಡಿದ್ದಾರೆ. ಪಿಸಿ ಮೋಹನ್ಗೆ ಕಠಿಣ ಸ್ಪರ್ಧೆ ಒಡ್ಡಿರುವ ಕಾಂಗ್ರೆಸ್ ಹಾಗೂ ಜೆಡಿಸ್ ಮೈತ್ರಿ ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಶದ್ ಕೂಡ ಹಿನ್ನಡೆ ಅನುಭವಿಸಿದ್ದಾರೆ.
ಈ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಪ್ರತಿಕ್ರಿಯಿಸಿದ್ದು, ಚುನಾವಣೆ ಫಲಿತಾಂಶ ನನಗೆ ಕಪಾಳ ಮೋಕ್ಷ ಮಾಡಿದಂತಿದೆ. ಜೊತೆಗೆ ಎಂದಿಗಿಂತ ಹೆಚ್ಚು ಟ್ರೋಲ್, ನಿಂದನೆ ಹಾಗೂ ಅವಮಾನ ನನ್ನ ದಾರಿಯಲ್ಲಿ, ನನ್ನ ಭವಿಷ್ಯದಲ್ಲಿ ನನಗೆ ಸಿಗಲಿದೆ. ಆದರೆ ನಾನು ನನ್ನ ನಿಲುವುಗಳಿಗೆ ಬದ್ಧನಾಗಿದ್ದೇನೆ. ನನ್ನ ದಾರಿಯ ನನ್ನ ಹೋರಾಟವೂ ಹೀಗೇ ಮುಂದುವರೆಯಲಿದೆ. ನನ್ನ ಕಷ್ಟದ ದಿನಗಳು ಇದೀಗ ಪ್ರಾರಂಭವಾಗಿದೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಜಾತ್ಯಾತೀತ ಭಾರತಕ್ಕಾಗಿ ಹೋರಾಟ ಮುಂದುವರಿಸುತ್ತೇನೆ. ನನ್ನ ಕಠಿಣ ಹೋರಾಟ ಹಾದಿ ಶುರುವಾಗಿದೆ. ನನ್ನನ್ನು ಬೆಂಬಲಿಸಿದ, ನನಗೆ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ. ಜೈ ಹಿಂದ್ ಎಂದು ಹೇಳಿದ್ದಾರೆ.