ನವದೆಹಲಿ, ಮೇ23(Daijiworld News/SS): ಚುನಾವಣೆ ಫಲಿತಾಂಶದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿದ್ದ ಚೌಕಿದಾರ್ ಪದವನ್ನು ತೆಗೆದಿದ್ದು, ಎಲ್ಲರೂ ಚೌಕಿದಾರ್ ಪದ ತೆಗೆಯುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ದೇಶದ ಜನತೆಗೆ ಸ್ಪಷ್ಟನೆ ಕೊಟ್ಟಿರುವ ಮೋದಿ, ತಮ್ಮ ಟ್ವಿಟರ್ ಮುಂದಿನ ಚೌಕಿದಾರ್ ಪದವನ್ನು ತೆಗೆಯುತ್ತಿದ್ದೇನೆ. ಆದರೆ, ಅದು ನನ್ನ ಭಾಗವಾಗಿಯೇ ಉಳಿಯಲಿದೆ, ಎಲ್ಲರೂ ಚೌಕಿದಾರ್ ಪದವನ್ನು ತೆಗೆಯುವಂತೆ ಮೋದಿ ಮನವಿ ಮಾಡಿದ್ದಾರೆ.
ಉತ್ಸಾಹವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಮಯ ಬಂದಿದೆ. ಈ ಉತ್ಸಾಹವನ್ನು ಎಲ್ಲಾ ಸಂದರ್ಭಗಳಲ್ಲಿಯೂ ಇಟ್ಟುಕೊಳ್ಳಲಾಗುತ್ತದೆ. ಭಾರತದ ಪ್ರಗತಿಯಾಗಿ ಕೆಲಸವನ್ನು ಮುಂದುವರೆಸಬೇಕಾಗಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ಪದೇ ಪದೇ ದೇಶದ ಕಾವಲುಗಾರ ಕಳ್ಳ ಎಂದು ಟೀಕಿಸುತ್ತಿದ್ದ ಹಿನ್ನೆಲೆಯಲ್ಲಿ ಮಾರ್ಚ್ 10 ರಂದು ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಚೌಕಿದಾರ್ ಅಭಿಯಾನವನ್ನು ಆರಂಭಿಸಲಾಗಿತ್ತು.