ಕೇರಳ, ಮೇ 23 (Daijiworld News/SM): ದೇವರನಾಡು ಕೇರಳ ಕಾಂಗ್ರೆಸ್ ಪಾಲಿಗೆ ಈ ಬಾರಿ ವರದಾನವಾಗಿ ಪರಿಣಮಿಸಿದೆ. ಕಾಂಗ್ರೆಸ್ ಕೈಹಿಡಿದಿರುವ ಏಕೈಕ ರಾಜ್ಯ ಕೇರಳ ಎಣಿಸಿಕೊಂಡಿದೆ. 20 ಕ್ಷೇತ್ರಗಳ ಪೈಕಿ 19 ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಬಿದ್ದಿವೆ. ಇನ್ನು ಉಳಿದ 1 ಕ್ಷೇತ್ರ ಸಿಪಿಎಂ ಪಾಲಾಗಿದೆ.
ಶಬರಿಮಲೆ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ಮಾತುಗಳು ಕಾರ್ಯಕರ್ತರು ಪಕ್ಷದ ಕೆಲವು ಮುಖಂಡರಲ್ಲಿತ್ತು. ಆದರೆ, ಎಲ್ಲಾ ಲೆಕ್ಕಾಚಾರಗಳು ತಲೆ ಕೆಳಗಾಗಿವೆ. 19 ಕ್ಷೇತ್ರಗಳಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ತನ್ನ ನೆಲೆಯನ್ನು ಕೇರಳದಲ್ಲಷ್ಟೇ ಸಾಬೀತುಪಡಿಸಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಮತ್ತು ಸಿಪಿಐಎಂ 8ರಲ್ಲಿ ಗೆದ್ದು ಬೀಗಿದ್ದವು. ಆದರೆ ಈ ಬಾರಿ ಗೆಲುವಿನ ಸಂಖ್ಯೆಯನ್ನು ಕಾಂಗ್ರೆಸ್ ಹೆಚ್ಚಿಸಿದೆ.