ಬೆಂಗಳೂರು,ಮೇ 24(Daijiworld News/MSP): ಶತಾಯ- ಗತಾಯ ತಮ್ಮ ಮಗನನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಮ್ಮ ಪುತ್ರ ನಿಖಿಲ್ ಗೆಲುವಿಗಾಗಿ ಹೆಣೆದೆ ರಣತಂತ್ರ ಠುಸ್ ಪಟಾಕಿಯಂತಾಗಿದೆ.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ಸುಮಲತಾ ಅಂಬರೀಷ್ ವಿರುದ್ಧ ಚುನಾವಣಾ ಅಖಾಡಕ್ಕಿಳಿದಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಟೊಂಕಕಟ್ಟಿ ನಿಂತು ನಡೆಸಿದ ಹೋರಾಟ, ಪ್ರಯತ್ನಗಳೆಲ್ಲವೂ ವ್ಯರ್ಥವಾಗಿದೆ. ಸುಮಲತಾ ಅಂಬರೀಶ್ ಒಂದು ಲಕ್ಷದ ಹದಿನೈದು ಸಾವಿರ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
ಜ್ಯೋತಿಷಿ ದ್ವಾರಕನಾಥ್ ಅವರ ಭವಿಷ್ಯ, ರಾಜ್ಯ ಹಾಗೂ ಹೊರರಾಜ್ಯದ ದೇಗುಲ ಭೇಟಿ ಯಾವೂದೂ ಕೂಡಾ ಗೆಲುವಿಗೆ ವರವಾಗಲಿಲ್ಲ. ವಿಶೇಷ ಪೂಜೆ, ಪುನಸ್ಕಾರ ಹೋಮ-ಹವನ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡೇಶ್ವರಿ, ತಮಿಳುನಾಡಿನ ಮುರುಗನ್ ನಾನಾ ದೇಗುಲ ಭೇಟಿ ಹಾಗೂ ಪ್ರಚಾರದ ವೇಳೆಯಲ್ಲಿ ಮಾಡಿದ ಭಾವನಾತ್ಮಕವಾಗಿ ಹೇಳಿಕೆಗಳು ಯಾವುದು ಕೂಡಾ ಗೆಲುವಿಗೆ ಪೂರಕವಾಗಲೇ ಇಲ್ಲ.