ನವದೆಹಲಿ,ಮೇ 24(Daijiworld News/MSP): ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ್ದು ನಮೋ ಸುನಾಮಿಗೆ ವಿಪಕ್ಷಗಳು ತರಗೆಲೆಗಳಂತೆ ನೆಲಕಚ್ಚಿದೆ. ವಿಶೇಷ ಎಂದರೆ ಬಿಜೆಪಿ ಗೆದ್ದು ಬೀಗಿದ ಮೊದಲ ದಿನವಾದ ಶುಕ್ರವಾರ ಮೋದಿ ನೇರವಾಗಿದ್ದು ಧಾವಿಸಿದ್ದು ತಮ್ಮ ರಾಜಕೀಯ ಗುರುವಿನ ಕಡೆಗೆ.
ಹೌದು ರಾಜಕೀಯವಾಗಿ ಮೋಡಿ ಮಾಡಿದ ಜೋಡಿಗಳಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕ ಹಾಗೂ ತಮ್ಮ ರಾಜಕೀಯ ಗುರು ಎಲ್ ಕೆ ಅಡ್ವಾಣಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಮಾರ್ಗದರ್ಶನ ನೀಡುವಂತೆ ಕೋರಿದ್ದಾರೆ. ಮಾತ್ರವಲ್ಲದೆಬಿ ಜೆಪಿಯ ಮತ್ತೋರ್ವ ಹಿರಿಯ ನಾಯಕ ಡಾ.ಎಂ.ಎಂ.ಜೋಷಿ ಅವರನ್ನು ಕೂಡ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ "ನಾನು ಇಂದು ಗೌರವಾನ್ವಿತ ಅಡ್ವಾಣಿ ಜೀ ಅವರನ್ನು ಭೇಟಿಯಾಗಿದ್ದೇನೆ. ಬಿಜೆಪಿಯ ಯಶಸ್ಸು ಪಡೆದ ಹಿಂದೆ ದಶಕಗಳ ಕಾಲ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅಡ್ವಾಣಿಯವರಂತಹ ಶೇಷ್ಟ್ರ ನಾಯಕರು ಬೆನ್ನ ಹಿಂದೆ ಇದ್ದಾರೆ. ಇವರೇ ಜನರಿಗೆ ಪಕ್ಷದ ಸೈದ್ದಾಂತಿಕ ವಿಚಾರಗಳನ್ನು ತಲುಪಿಸಿದರು ಎಂದು ಟ್ವೀಟ್ ಮಾಡಿದ್ದಾರೆ.