ನವದೆಹಲಿ,ಅ.31(DaijiworldNews/TA):ಫ್ಲಾಟ್ ಖರೀದಿದಾರರು ವಂಚನೆಗೊಳಗಾದ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಗಂಭೀರ್ ಮತ್ತು ಇತರರ ಬಿಡುಗಡೆಯನ್ನು ರದ್ದುಗೊಳಿಸಿದೆ.
ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಮ್ಯಾಜಿಸ್ಟ್ರೀಯಲ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದರು, ಇದು ಗಂಭೀರ್ ವಿರುದ್ಧದ ಆರೋಪಗಳನ್ನು ನಿರ್ಧರಿಸುವಲ್ಲಿ ‘ಮನಸ್ಸಿನ ಅಸಮರ್ಪಕ ಅಭಿವ್ಯಕ್ತಿ’ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ‘ಆರೋಪಗಳು ಗೌತಮ್ ಗಂಭೀರ್ ಪಾತ್ರದ ಬಗ್ಗೆ ಹೆಚ್ಚಿನ ತನಿಖೆಗೆ ಅರ್ಹವಾಗಿವೆ’ ಎಂದು ನ್ಯಾಯಾಧೀಶ ಗೋಗ್ನೆ ತಮ್ಮ ಅಕ್ಟೋಬರ್ 29 ರ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಗಂಭೀರ್ ಅವರು ಬ್ರಾಂಡ್ ಅಂಬಾಸಿಡರ್ ಪಾತ್ರವನ್ನು ಮೀರಿ ಕಂಪನಿಯೊಂದಿಗೆ ಹಣಕಾಸಿನ ವಹಿವಾಟು ನಡೆಸಿದ್ದರು ಮತ್ತು ಜೂನ್ 29, 2011 ಮತ್ತು ಅಕ್ಟೋಬರ್ 1, 2013 ರ ನಡುವೆ ಹೆಚ್ಚುವರಿ ನಿರ್ದೇಶಕರಾಗಿದ್ದರು ಎಂದು ನ್ಯಾಯಾಲಯವು ಗಮನಿಸಿದೆ ಎಂದು ಹೇಳಲಾಗಿದೆ.