ಜೆಡ್ಡಾ,ನ.24(DaijiworldNews/AK): 2025ರ ಐಪಿಎಲ್ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಭಾನುವಾರ ಪ್ರಾರಂಭಗೊಳ್ಳಲಿದೆ. ಸೌದಿ ಅರೇಬಿಯಾದ ಜೆಡ್ಡಾ ಮತ್ತು ಅಬಾಡಿ ಅಲ್-ಜೋಹರ್ ಅರೆನಾದಲ್ಲಿ ಇಂದು (ನ.24) ಮತ್ತು ನಾಳೆ (ನ.25) ಹರಾಜು ಪ್ರಕ್ರಿಯೆ ನಡೆಯಲಿದೆ.
ಒಂದು ಫ್ರಾಂಚೈಸಿ ಕನಿಷ್ಠ 18 ರಿಂದ 25 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಟ್ಟು 577 ಆಟಗಾರರು ಕಣದಲ್ಲಿದ್ದಾರೆ. 10 ಐಪಿಎಲ್ ತಂಡಗಳು 641.5 ಕೋಟಿ ರೂ. ಹಣವನ್ನು ಹರಾಜಿನಲ್ಲಿ ವಿನಿಯೋಗಿಸಲಿದೆ.
ಈ ಬಾರಿ ಹರಾಜುನಲ್ಲಿ ಸುಮಾರು 204 ಮಂದಿ ಆಟಗಾರರು ಆರಿಸಲ್ಪಡುವ ಸಾಧ್ಯತೆ ಇದೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳಾದ ರಿಷಬ್ ಪಂತ್ ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಹೆಚ್ಚಿನ ಮೊತ್ತಕ್ಕೆ ಖರೀದಿಸಲ್ಪಡುವ ಆಟಗಾರರರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.