ಮುಂಬೈ, ನ.26(DaijiworldNews/TA): ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮೆಗಾ ಆಕ್ಷನ್ನಲ್ಲಿ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಮಾರಾಟವಾಗದೇ ಉಳಿದಿದ್ದಾರೆ. ವಾರ್ನರ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಅಂತಿಮ ಸುತ್ತಿನ ಶಾರ್ಟ್ ಲಿಸ್ಟ್ನಲ್ಲೂ ವಾರ್ನರ್ಗೆ ಸ್ಥಾನ ಲಭಿಸಿಲ್ಲ. ಈ ಮೂಲಕ ಡೇವಿಡ್ ವಾರ್ನರ್ ಅನ್ಸೋಲ್ಡ್ ಆಗಿಯೇ ಉಳಿದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಳೆದ ಸೀಸನ್ನಲ್ಲಿ ಕಾಣಿಸಿಕೊಂಡಿದ್ದ ವಾರ್ನರ್ ಈ ಬಾರಿ ಕೂಡ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ 38 ವರ್ಷದ ವಾರ್ನರ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ. ಇದರೊಂದಿಗೆ ಐಪಿಎಲ್ನಲ್ಲಿ ವಾರ್ನರ್ ಅವರ ಯುಗಾಂತ್ಯವಾಗಿದೆ ಎಂದು ಹೇಳಬಹುದಾಗಿದೆ.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ವಾರ್ನರ್ಗೆ ಮತ್ತೆ ಐಪಿಎಲ್ನಲ್ಲಿ ಚಾನ್ಸ್ ಲಭಿಸುವ ಸಾಧ್ಯತೆಯಿಲ್ಲ. ಐಪಿಎಲ್ನಲ್ಲಿ ಡೇವಿಡ್ ವಾರ್ನರ್ ಅವರ ಯುಗಾಂತ್ಯವಾಗಿದೆ ಎನ್ನಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಸನ್ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿರುವ ಡೇವಿಡ್ ವಾರ್ನರ್ 184 ಪಂದ್ಯಗಳನ್ನಾಡಿದ್ದಾರೆ.