ಮುಂಬೈ, ನ.30(DaijiworldNews/AK):ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಡರ್ಬನ್ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿದ್ದು, ಗೆಲುವಿನ ಸನಿಹದಲ್ಲಿದೆ.
ಇದರ ಮಧ್ಯೆ ದಕ್ಷಿಣ ಆಫ್ರಿಕಾ ಕ್ರಿಕೆಟ್ಗೆ ಆಘಾತ ಎದುರಾಗಿದ್ದು, ತಂಡದ ಪರ ಸುಮಾರು 100 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ ಮಾಜಿ ಅನುಭವಿ ಆಟಗಾರನನ್ನು ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿಸಲಾಗಿದೆ.
ದಕ್ಷಿಣ ಆಫ್ರಿಕಾದ ಅಪರಾಧ ತನಿಖಾ ವಿಭಾಗವು ಮಾಜಿ ವೇಗದ ಬೌಲರ್ ಲೊನ್ವಾಹೊ ತ್ಸೊಟ್ಸೊಬೆ ಸೇರಿದಂತೆ ಇನ್ನೂ ಇಬ್ಬರು ಮಾಜಿ ಆಟಗಾರರನ್ನು ಬಂಧಿಸಿದೆ.
ದಕ್ಷಿಣ ಆಫ್ರಿಕಾದ ಆದ್ಯತಾ ಅಪರಾಧ ತನಿಖಾ ನಿರ್ದೇಶನಾಲಯ ಒಂಬತ್ತು ವರ್ಷಗಳ ಹಿಂದಿನ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಈ ಮೂವರು ಮಾಜಿ ಕ್ರಿಕೆಟಿಗರನ್ನು ಬಂಧಿಸಿದೆ. ಸೋತ್ಸೋಬೆ , ತಮ್ಸಂಕಾ ಸೊಲೆಕಿಲೆ ಮತ್ತು ಮಭಾಲಟಿ ಕೂಡ ಸೇರಿದ್ದಾರೆ.
ಈ ಪೈಕಿ ಸೊಲೆಕಿಲ್ ದಕ್ಷಿಣ ಆಫ್ರಿಕಾ ಪರ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 160 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಮಭಾಲಟಿ ದಕ್ಷಿಣ ಆಫ್ರಿಕಾ ಪರ ಒಂದೇ ಒಂದು ಪಂದ್ಯವನ್ನಾಡದಿದ್ದರೂ, ದೇಶೀಯ ಕ್ರಿಕೆಟ್ನಲ್ಲಿ 129 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.
.