ಯುಎಇ, ಡಿ.04(DaijiworldNews/AA): ಅಂಡರ್-19 ಏಷ್ಯಾಕಪ್ನಲ್ಲಿ ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ತಂಡದ ವಿರುದ್ಧ ಸೋತಿದ್ದ ಭಾರತ ತಂಡ ಇದೀಗ ಇಂಡಿಯಾ ಸತತ ಎರಡು ಪಂದ್ಯಗಳನ್ನು ಗೆದ್ದು ಸೆಮಿ ಪೈನಲ್ಗೇರುವ ಮೂಲಕ ಕಮ್ಬ್ಯಾಕ್ ಮಾಡಿದೆ.
ತನ್ನ ಎರಡನೇ ಪಂದ್ಯದಲ್ಲಿ ಜಪಾನ್ ತಂಡವನ್ನು ಸೋಲಿಸಿದ್ದ ಭಾರತ ತಂಡ ಇದೀಗ ಯುಎಇ ತಂಡವನ್ನು ಮಣಿಸಿದೆ. ಕೇವಲ 138 ರನ್ಗಳ ಗುರಿ ಬೆನ್ನತ್ತಿದ ಭಾರತ ಯುವ ಪಡೆ 50 ಓವರ್ಗಳ ಪಂದ್ಯವನ್ನು ಕೇವಲ 16 ಓವರ್ಗಳಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಭಾರತದ ಪರ ಆರಂಭಿಕ ವೈಭವ್ ಸೂರ್ಯವಂಶಿ 46 ಎಸೆತಗಳಲ್ಲಿ 76 ರನ್ ಗಳಿಸಿದರೆ, ಆಯುಷ್ ಮ್ಹಾತ್ರೆ 51 ಎಸೆತಗಳಲ್ಲಿ 67 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ಯುಎಇ ತಂಡವನ್ನು ಸೋಲಿಸುವ ಮೂಲಕ ಭಾರತ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಯುಎಇ ವಿರುದ್ಧದ ಬೃಹತ್ ಗೆಲುವಿನ ನಂತರ ಅದರ ನೆಟ್ ರನ್ ರೇಟ್ ತುಂಬಾ ಹೆಚ್ಚಾಗಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.