ಬೆಂಗಳೂರು, ಏ. 01(DaijiworldNews/AK):ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬ್ಯುಸಿಯಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕೊಹ್ಲಿ ಆಸ್ಟ್ರೇಲಿಯಾದ ಪ್ರಸಿದ್ಧ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ಎರಡು ಸೀಸನ್ನಲ್ಲಿ ಇವರು ಸಿಡ್ಮಿ ಸಿಕ್ಸರ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರಂತೆ. ಹೀಗಾಗಿ ವಿದೇಶಿ ಲೀಗ್ನಲ್ಲಿ ಆಡಲಿರುವ ಮೊದಲ ಸಕ್ರಿಯ ಭಾರತೀಯ ಆಟಗಾರ ವಿರಾಟ್ ಕೊಹ್ಲಿ ಆಗಲಿದ್ದಾರೆ.
ಸಿಡ್ನಿ ಸಿಕ್ಸರ್ಸ್ ಏಪ್ರಿಲ್ 1 ರಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಂದಿನ ಎರಡು ಬಿಗ್ ಬ್ಯಾಷ್ ಲೀಗ್ ಸೀಸನ್ಗಳಿಗೆ ಸ್ಟಾರ್ ಬ್ಯಾಟರ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದೆ.ಬಿಸಿಸಿಐ ನಿಯಮದ ಪ್ರಕಾರ, ಭಾರತೀಯ ಆಟಗಾರರು ನಿವೃತ್ತರಾಗುವವರೆಗೆ ಬಿಬಿಎಲ್ನಂತಹ ವಿದೇಶಿ ಲೀಗ್ಗಳಲ್ಲಿ ಆಡಲು ಅವಕಾಶವಿಲ್ಲ. ಭಾರತೀಯ ಆಟಗಾರ ಅಂತರರಾಷ್ಟ್ರೀಯ ಕ್ರಿಕೆಟ್ ಜೊತೆಗೆ ದೇಶೀಯ ಕ್ರಿಕೆಟ್ನಿಂದಲೂ ನಿವೃತ್ತರಾದರೆ ಮಾತ್ರ ಹೊರಗೆ ಹೋಗಿ ವಿದೇಶಿ ಲೀಗ್ಗಳಲ್ಲಿ ಆಡಲು ಸಾಧ್ಯ. ಆದರೆ ಸಿಡ್ನಿ ಸಿಕ್ಸರ್ಸ್ನ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಕೋಲಾಹಲವನ್ನು ಉಂಟು ಮಾಡಿದೆ.
ವಿರಾಟ್ ಕೊಹ್ಲಿ ಮುಂದಿನ ಎರಡು ಸೀಸನ್ಗಳಿಗೆ ಅಧಿಕೃತವಾಗಿ ಸಿಕ್ಸರ್ ಪರ ಆಡಲಿದ್ದಾರೆ!” ಎಂದು ಸಿಕ್ಸರ್ಸ್ನ ಟ್ವೀಟ್ನಲ್ಲಿ ಹೇಳಲಾಗಿದೆ.ಆದರೆ, ಈ ಟ್ವೀಟ್ ಜೊತೆಗೆ ಏಪ್ರಿಲ್ ಮೂರ್ಖರ ದಿನವನ್ನು ಆಚರಿಸಲು ಇದು ತಾವು ಮಾಡಿದ ತಮಾಷೆ ಎಂದು ಸಿಕ್ಸರ್ಸ್ ಸ್ವತಃ ಬಹಿರಂಗಪಡಿಸಿದೆ.