ಚೆನ್ನೈ,ಏ.05 (DaijiworldNews/AK): ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಅತ್ಯುತ್ತಮ ಪ್ರದರ್ಶನ ನೀಡಿದೆ. ಆದರೆ 5 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ನ ಸೋಲಿನ ಸರಣಿ ಸತತ 4ನೇ ಪಂದ್ಯದಲ್ಲೂ ಮುಂದುವರೆದಿದೆ.

ಇಂದು ಏಪ್ರಿಲ್ 5 ರ ಶನಿವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 17 ನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 25 ರನ್ಗಳಿಂದ ಸೋಲಿಸಿ ಗೆಲುವು ಪಡೆಯವುದರಲ್ಲಿ ಯಶಸ್ಸಿಯಾಗಿದೆ.
ಈ ಮೂಲಕ ಡೆಲ್ಲಿ ಈ ಆವೃತ್ತಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡರೆ, ಇತ್ತ ಚೆನ್ನೈ ತಂಡ ಸತತ ಮೂರನೇ ಸೋಲನ್ನು ಅನುಭವಿಸಿ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಈ ಪಂದ್ಯವು ಧೋನಿಗೆ ಬಹಳ ವಿಶೇಷವಾಗಿತ್ತು. ಮೊದಲ ಬಾರಿಗೆ ಧೋನಿಯ ಪೋಷಕರು ಮಗನ ಆಟವನ್ನು ನೋಡಲು ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ ಧೋನಿಗೆ ಅವರ ಮುಂದೆ ತಂಡದ ಗೆಲುವು ಪಡೆಯವಲ್ಲಿ ಸಾಧ್ಯವಾಗಿಲ್ಲ.
ಇದರೊಂದಿಗೆ, 15 ವರ್ಷಗಳ ನಂತರ ಚೆಪಾಕ್ನಲ್ಲಿ ದೆಹಲಿ ತಂಡವು ಚೆನ್ನೈ ತಂಡವನ್ನು ಮೊದಲ ಬಾರಿಗೆ ಸೋಲಿಸಿದ ದಾಖಲೆಯನ್ನುನಿರ್ಮಿಸಿದೆ.