ವೆಲ್ಲಿಂಗ್ಟನ್, ಏ.06 (DaijiworldNews/AA): ನ್ಯೂಜಿಲೆಂಡ್ನ ಬೇ ಓವಲ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ನಡೆಯುತ್ತಿದ್ದ ವೇಳೆಯೇ ಕರೆಂಟ್ ಹೋಗಿದ್ದರು.

ನ್ಯೂಜಿಲೆಂಡ್ನ ಬೌಲರ್ ಜಾಕೋಬ್ ಡಫಿ ಬೌಲಿಂಗ್ ಮಾಡುತ್ತಿದ್ದು, ಪಾಕಿಸ್ತಾನದ ತಹೀರ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಸ್ಟೇಡಿಯಂನಲ್ಲಿ ಕರೆಂಟ್ ಹೋಗಿದೆ. ಆದರೆ ಕರೆಂಟ್ ಹೋಗುವಷ್ಟರಲ್ಲಿ 31 ಎಸೆತಗಳಲ್ಲಿ 33 ರನ್ ಗಳಿಸಿದ್ದ ತಹೀರ್ ಔಟ್ ಆಗಿದ್ದು, ಸ್ಟೇಡಿಯಂನಲ್ಲಿದ್ದ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿತು.
ಮೊದಲು ಕ್ರೀಸ್ಗೆ ಇಳಿದ ನ್ಯೂಜಿಲೆಂಡ್ ತಂಡ 50 ಓವರ್ಗಳಲ್ಲಿ 264 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಾಕ್ ತಂಡ, 40 ಓವರ್ಗಳಲ್ಲಿ 221 ರನ್ಗೆ ಆಲೌಟ್ ಆಯಿತು.