ಮುಂಬೈ, ಏ.09 (DaijiworldNews/AA): ಮಹೇಂದ್ರ ಸಿಂಗ್ ಧೋನಿಯನ್ನು ಹೊಗಳುವ ಭರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಎಡವಟ್ಟು ಮಾಡಿಕೊಂಡಿದ್ದಾರೆ.

ಮುಲ್ಲನ್ಪುರ್ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ಗೆ ಇಳಿಯುತ್ತಿದ್ದಂತೆ ಅಂಬಾಟಿ ರಾಯುಡು ಹೊಗಳಿಕೆ ಪ್ರಾರಂಭಿಸಿದ್ದರು. ಇವತ್ತು ಧೋನಿ ಬ್ಯಾಟ್ ಇಟ್ಕೊಂಡು ಬರುತ್ತಿಲ್ಲ. ಕತ್ತಿಯೊಂದಿಗೆ ಆಗಮಿಸುತ್ತಿದ್ದಾರೆ ಎಂದು ಅಂಬಾಟಿ ರಾಯುಡು ಧೋನಿಯನ್ನು ವರ್ಣಿಸಿದ್ದಾರೆ.
ಇದೀಗ ಅಂಬಾಟಿ ರಾಯುಡು ಧೋನಿಯನ್ನ ಹೊಗಳಿರುವ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಹೊಗಳುವ ಭರದಲ್ಲಿ ಎದುರಾಳಿ ತಂಡದ ವಿರುದ್ಧ ಕತ್ತಿಯೊಂದಿಗೆ ಆಗಮಿಸುತ್ತಿದ್ದಾರೆ ಎನ್ನುವು ಎಷ್ಟು ಸರಿ? ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿಯನ್ನು ಮಾತ್ರ ಹೊಗಳುತ್ತಾ ಕೂರುವ ಅಂಬಾಟಿ ರಾಯುಡು ಅವರನ್ನು ಕಾಮೆಂಟ್ರಿಗಾಗಿ ಹೇಗೆ ಆಯ್ಕೆ ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಾಮಾನ್ಯವಾಗಿ ಕಾಮೆಂಟ್ರಿ ಪ್ಯಾನೆಲ್ನಲ್ಲಿ ಕಾಣಿಸಿಕೊಳ್ಳುವವರು ನಿಷ್ಪಕ್ಷಪಾತರಾಗಿ ವರ್ತಿಸಬೇಕು. ಆದರೆ ಅಂಬಾಟಿ ರಾಯುಡು ನಿಷ್ಪಕ್ಷಪಾತರಾಗಿ ವರ್ತಿಸುತ್ತಿಲ್ಲ. ಈ ಹಿಂದೆ ರಾಯುಡು ಆರ್ಸಿಬಿ ತಂಡವನ್ನು ಬಹಿರಂಗವಾಗಿ ಸೋಲಬೇಕೆಂದು ಆಗ್ರಹಿಸಿದ್ದರು. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗೇಲಿ ಮಾಡಿ ಹಲವು ಹೇಳಿಕೆ ನೀಡಿದ್ದರು. ಇದೀಗ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ರಾಯುಡು ಅವರು ನೀಡಿರುವ ಹೇಳಿಕೆ ವಿರುದ್ಧ ಪಂಜಾಬ್ ಕಿಂಗ್ಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.