ನವದೆಹಲಿ, ಜೂ 18 (Daijiworld News/MSP): ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ದದ ವಿಶ್ವಕಪ್ ಪಂದ್ಯದಲ್ಲಿ ಸ್ವಲ್ಪವೂ ಹೋರಾಟ ನೀಡದೆ ಹೀನಾಯವಾಗಿ ಸೋತ ಬಗ್ಗೆ ಪಾಕಿಸ್ತಾನ ಕ್ರಿಕೆಟಿಗರ ವಿರುದ್ಧ ಪಾಕ್ ಅಭಿಮಾನಿಗಳ ಆಕ್ರೋಶ ಇನ್ನು ಕಮ್ಮಿಯಾಗಿಲ್ಲ. ಈ ನಡುವೆ ಪಾಕ್ ಆಟಗಾರ ಶೋಯಬ್ ಮಲಿಕ್ ಮತ್ತು ಅವರ ಪತ್ನಿ ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಪಾಕಿಸ್ತಾನಿ ಕ್ರಿಕೆಟಿಗರ ಡಯಟಿಷಿಯನ್ ನಾನಲ್ಲ ಎಂದು ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ. ಇದಕ್ಕೆ ಕಾರಣವಾಗಿದ್ದು ಪಾಕಿಸ್ತಾನಿ ನಟಿ ವೀಣಾ ಮಲಿಕ್ ಅವರ ಟ್ವೀಟ್.
ಪಾಕಿಸ್ತಾನ ತಂಡದ ಕ್ರಿಕೆಟ್ ಆಟಗಾರರು ಪಂದ್ಯದ ಹಿಂದಿನ ದಿನ ರಾತ್ರಿ ಮ್ಯಾಂಚೆಸ್ಟರ್ನ ಶೀಶಾ ಕೆಫೆ ಬಾರ್ನಲ್ಲಿ ಹುಕ್ಕಾ ಎಳೆಯುತ್ತ ಪಿಜ್ಜಾ, ಬರ್ಗರ್ ತಿಂದು ಮಜಾ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ಆಟಗಾರರೊಂದಿಗೆ ಸಾನಿಯಾ ಮಿರ್ಜಾ ಕೂಡಾ ಇದ್ದರು.ಫಿಟ್ನೆಸ್ ಚಿಂತೆಯೇ ಇಲ್ಲದೆ ಪಾಕ್ ಕ್ರಿಕೆಟಿಗರು ಜಂಕ್ ಫುಡ್ ತಿನ್ನುವ ವಿಡೀಯೋ ವೈರಲ್ ಆಗುತ್ತಿದ್ದಂತೆಯೇ , ಸಾನಿಯಾ ಮಿರ್ಜಾ, 'ನಮ್ಮ ಒಪ್ಪಿಗೆ ಇಲ್ಲದೆ ವಿಡಿಯೋ ತೆಗೆದು ಅಪ್ಲೋಡ್ ಮಾಡಿ ನಮ್ಮ ಪ್ರೈವೆಸಿಗೆ ಧಕ್ಕೆ ತರಲಾಗಿದೆ. ನಾವು ಊಟಕ್ಕೆ ತೆರಳಿದ್ದಾಗ ನಮ್ಮ ಜೊತೆ ಒಂದು ಮಗು ಕೂಡ ಇತ್ತು' ಎಂದು ಟ್ವೀಟಿಸಿದ್ದರು
ಫಿಟ್ನೆಸ್ ಕಡೆಗೆ ಕಾಳಜಿ ವಹಿಸಿದೆ ಮ್ಯಾಚ್ ನ ಹಿಂದಿನ ರಾತ್ರಿಯೂ ಜಂಕ್ ಫುಡ್ ತಿಂದು, ಹುಕ್ಕಾ ಸೇವಿಸಿ ಮತ್ತು ಸಾನಿಯಾ ಮಿರ್ಜಾ ಜೊತೆ ಕಾಣಿಸಿಕೊಂಡಿದ್ದಕ್ಕೆ ಪಾಕ್ ಅಭಿಮಾನಿಗಳು ಟ್ವಿಟ್ಟರ್ನಲ್ಲಿ ಆಕ್ರೋಶ ಹೊರಹಾಕಿದ್ದರು. ಭಾರತದ ಎದುರು ಹೀನಾಯವಾಗಿ ಸೋಲಲು ಪಾಕ್ ತಂಡದ ಬೇಜವಾಬ್ದಾರಿ ನಡವಳಿಕೆಯೇ ಕಾರಣ ಎಂದು ಟೀಕಿಸಿದ್ದರು. ಇನ್ನು, ಈ ವಿಡಿಯೋ ಬಗ್ಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದ ಸಾನಿಯಾ ಮಿರ್ಜಾ, " ನಮ್ಮ ಅನುಮತಿ ಇಲ್ಲದೆ, ವಿಡಿಯೋ ತೆಗೆದು ಅಪ್ಲೋಡ್ ಮಾಡುವ ಮೂಲಕ ನಮ್ಮ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ. ನಾವು ಊಟಕ್ಕೆ ತೆರಳಿದ್ದಾಗ ನಮ್ಮ ಜೊತೆ ಒಂದು ಮಗು ಕೂಡ ಇತ್ತು" ಎಂದು ಟ್ವೀಟಿಸಿದ್ದರು.
ಇದಕ್ಕೆ ಟ್ವಿಟ್ಟರ್ ನಲ್ಲೇ ಪ್ರತಿಕ್ರಿಯೆ ನೀಡಿದ್ದ ಪಾಕ್ ನಟಿ ವೀಣಾ ಮಲಿಕ್," ನಿಮಗಿಂತ ನಾನು ನಿಮ್ಮೊಂದಿಗಿದ್ದ ಮಗುವಿನ ಬಗ್ಗೆ ಹೆಚ್ಚು ಯೋಚಿಸಿತ್ತಿದ್ದೇನೆ. ಆ ಪುಟ್ಟ ಮಗುವನ್ನು ಹುಕ್ಕಾ ಬಾರ್ಗೆ ಕರೆಕೊಂಡು ಹೋಗಿದ್ದು ಎಷ್ಟು ಸರಿ? ಮಗುವಿನ ತಾಯಿಯಾಗಿ ಮತ್ತು ನೀವೊಬ್ಬ ಕ್ರೀಡಾಪಟುವಾಗಿ ಜಂಕ್ಫುಡ್ ಆರೋಗ್ಯಕ್ಕೆ ಉತ್ತಮವಲ್ಲ ಎಂದು ನಿಮಗೆ ಗೊತ್ತಿಲ್ಲವೇ?" ಎಂದು ಖಾರವಾಗಿ ಟ್ವೀಟಿಸಿದ್ದರು.
ಇದಕ್ಕೆ ಸ್ಪಲ್ಪ ಖಡಕ್ ಆಗಿ ಉತ್ತರಿಸಿರುವ ಸಾನಿಯಾ ಮಿರ್ಜಾ, " ನನ್ನ ಮಗುವನ್ನುನಾನು ಬಾರ್ಗೆ ಕರೆದುಕೊಂಡು ಹೋಗಿದ್ದೆ ಎಂದು ಹೇಳಿಲ್ಲ. ಅದ್ರೂ ಕೂಡಾ ಈ ಬಗ್ಗೆ ನೀವಾಗಲೀ ಅಥವಾ ಜಗತ್ತಿನ ಇನ್ಯಾರೇ ಆಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮತ್ತು ಈ ವಿಚಾರಕ್ಕೂನಿಮಗೂ ಯಾವುದೇ ಸಂಬಂಧವಿಲ್ಲ! ನನ್ನ ಮಗುವಿನ ಬಗ್ಗೆ ಪ್ರಪಂಚದ ಇನ್ಯಾರೋ ತೋರುವ ಕಾಳಜಿಗಿಂತ ನೂರು ಪಟ್ಟು ಹೆಚ್ಚು ನಾನು ಮಗನ ಬಗ್ಗೆ ಕಾಳಜಿ ಇದೆ. ಇನ್ನೊಂದು ವಿಚಾರ, ಪಾಕಿಸ್ತಾನದ ಕ್ರಿಕೆಟಿಗರು ಜಂಕ್ಫುಡ್ ತಿನ್ನಬಾರದು ಎಂದು ಹೇಳಲು ನಾನು ಅವರ ಡಯಟಿಷಿಯನ್ ಅಲ್ಲ. ಹೀಗೇ ಮಾಡಬೇಕು ಎಂದು ಹೇಳಲು ನಾನು ಅವರ ತಾಯಿ, ಪ್ರಿನ್ಸಿಪಾಲ್, ಟೀಚರ್ ಯಾವುದೂ ಅಲ್ಲ' ಎಂದು ಅವರ ಕಾಳೆಲೆದಿದ್ದಾರೆ.