ಲಂಡನ್, ಜೂ 19 (Daijiworld News/SM): ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯಗೊಂಡಿದ್ದ ಶಿಖರ್ ಧವನ್ ಇದೀಗ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹರಿಯಬಿಟ್ಟಿದ್ದಾರೆ. ದೇಶಕ್ಕಾಗಿ ವಿಶ್ವಕಪ್ ನಲ್ಲಿ ಆಡುವ ಅವಕಾಶ ಮಿಸ್ ಆಗುತ್ತಿದೆ ಎಂದು ಧವನ್ ಬೇಸರ ವ್ಯಕ್ತಪಡಿಸಿದ್ದಾರೆ.
"ನನ್ನ ಮೇಲೆ ನೀವು ತೋರಿಸುತ್ತಿರುವ ಪ್ರೀತಿ, ಕಾಳಜಿಗೆ ನನ್ನ ಆಭಾರಿಯಾಗಿದ್ದೇನೆ ಎಂದಿರುವ ಅವರು ಬೆರಳಿಗೆ ಆಗಿರುವ ಗಾಯ ಗುಣವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಟೀಂ ಇಂಡಿಯಾ ಹಾಗೂ ದೇಶಕ್ಕಾಗಿ ಆಟವಾಡಬೇಕೆನ್ನುವ ಹಂಬಲವಾಗಿತ್ತು. ಆದರೆ ಇದೀಗ ಅದು ಈಡೇರುತ್ತಿಲ್ಲ. ಗಾಯಗುಣಮುಖವಾಗುವ ತನಕ ಮೈದಾನಕ್ಕೆ ಇಳಿಯುವ ಹಾಗಿಲ್ಲ. ಆದರೂ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ.
ಟೀಂ ಇಂಡಿಯಾ ಇದೇ ರೀತಿ ತನ್ನ ಗೆಲುವಿನ ನಾಗಲೋಟ ಮುಂದುವರೆಸಲಿದೆ. ಹಾಗೂ ಅಂತಿಮವಾಗಿ ಈ ಸಲ ನಾವೇ ವಿಶ್ವಕಪ್ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಂಡಕ್ಕೆ ಇದೇ ರೀತಿ ಬೆಂಬಲ ಅಗತ್ಯವಾಗಿದೆ ಎಂದವರು ಪ್ರತಿಕ್ರಿಯೆ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಜೂನ್ 9ರಂದು ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಶಿಖರ್ ಗಾಯಗೊಂಡಿದ್ದರು. ಗಾಯದ ನೋವಿನಲ್ಲೂ ಅವರ ಶತಕ ಸಿಡಿಸಿದ್ದರು. ಬಳಿಕದ ಪಂದ್ಯಗಳಿಂದ ಅವರನ್ನು ಹೊರಗಿಡಲಾಗಿತ್ತು. ಶೀಘ್ರ ಚೇತರಿಸಿಕೊಂಡು ಮತ್ತೆ ಅವರು ತಂಡ ಸೇರಿಕೊಳ್ಳುತ್ತಾರೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿತ್ತು. ಅಲ್ಲದೆ, ವೈದ್ಯರೂ ಕೂಡ 2 ವಾರದ ವಿಶ್ರಾಂತಿ ಬಳಿಕ ತಂಡಕ್ಕೆ ಸೇರಿಕೊಳ್ಳಬಹುದೆಂದು ತಿಳಿಸಿದ್ದರು.
ಆದರೆ, ಸ್ವತಃ ಶಿಖರ್ ಪ್ರತಿಕ್ರಿಯೆ ನೀಡಿದ್ದು, ಗಾಯ ಗುಣಮುಖವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.