ದೆಹಲಿ, ಮೇ. 18 (DaijiworldNews/AA): ಐಪಿಎಲ್ 2025 ರ 60ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡವು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಡೆಲ್ಲಿ ಪರ ಬ್ಯಾಟಿಂಗ್ ಮಾಡಿದ ಕೆ ಎಲ್ ರಾಹುಲ್ ವಿರಾಟ್ ಕೊಹ್ಲಿಯ ಟಿ20 ದಾಖಲೆಯನ್ನು ಧ್ವಂಸಗೊಳಿಸಿದ್ದಾರೆ.

ಈ ಪಂದ್ಯದಲ್ಲಿ ಕೆಎಲ್ ರಾಹುಲ್ 65 ಎಸೆತಗಳಲ್ಲಿ 112 ರನ್ ಗಳಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ರಾಹುಲ್ 33 ರನ್ ಬಾರಿಸಿದ ತಕ್ಷಣ ಟಿ20 ಕ್ರಿಕೆಟ್ನಲ್ಲಿ 8000 ರನ್ ಪೂರ್ಣಗೊಳಿಸಿದರು. ಟಿ20 ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 8000 ರನ್ ಪೂರೈಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಮೂಲಕ ಟಿ20ಯಲ್ಲಿ ಈ ದಾಖಲೆ ಬರೆದ ಆರನೇ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ರಾಹುಲ್ಗೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಸುರೇಶ್ ರೈನಾ ಮತ್ತು ಸೂರ್ಯಕುಮಾರ್ ಯಾದವ್ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ರಾಹುಲ್ 8000 ಟಿ20 ರನ್ ಪೂರೈಸುವ ಜೊತೆಗೆ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದಿದ್ದಾರೆ.
ಅತ್ಯಂತ ವೇಗವಾಗಿ 8000 ರನ್ ಪೂರೈಸಿದ ದಾಖಲೆ ಈ ಮೊದಲು ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ 243 ಇನ್ನಿಂಗ್ಸ್ಗಳಲ್ಲಿ ಈ ದಾಖಲೆ ಸೃಷ್ಟಿಸಿದ್ದರು. ಆದರೆ ರಾಹುಲ್ ಅವರನ್ನು ಹಿಂದಿಕ್ಕಿ ಕೇವಲ 224 ಇನ್ನಿಂಗ್ಸ್ಗಳಲ್ಲಿ ಕೆಎಲ್ ರಾಹುಲ್ 8000 ರನ್ ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.