ದೆಹಲಿ, ಜೂ 21 (Daijiworld News/SM): ಕಡಿಮೆ ಪಂದ್ಯದಲ್ಲಿ 11 ಸಾವಿರ ರನ್ ಪೂರೈಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಅದೇ ರೀತಿ ಹಲವು ದಾಖಲೆಗಳು ಈ ವಿಶ್ವಕಪ್ ನಲ್ಲಿ ಬರೆಯಲ್ಪಟ್ಟಿವೆ. ಇದೀಗ ಕೊಹ್ಲಿಗೆ ಮತ್ತೊಂದೆ ದಾಖಲೆಗೆ ಅವಕಾಶ ಎದುರು ನೋಡುತ್ತಿದೆ.
ಇದೀಗ ವೇಗದ 20 ಸಾವಿರ ರನ್ ದಾಖಾಲಿಸುವ ಅವಕಾಶಾವೂ ಕೂಡ ಕೊಹ್ಲಿ ಪಾಲಿಗಿದೆ. ಜೂನ್ 22ರಂದು ಅಫ್ಘಾನಿಸ್ತಾನದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಒದೊಮ್ಮೆ 104 ಪ್ಲಸ್ ರನ್ ಗಳನ್ನು ಸಿಡಿಸಿದ್ದೇ ಆದಲ್ಲಿ, ವೇಗದ 20 ಸಾವಿರ ರನ್ ಗಳ ಗಡಿ ದಾಟಿದ ಭಾರತೀಯ ಆಟಗಾರ ಎನಿಸಲಿದ್ದಾರೆ.
ಅಲ್ಲದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಮುರಿದು ಕೊಹ್ಲಿ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆಯಲಿದ್ದಾರೆ. ಹಾಗೂ ಈ ಸಾಧನೆ ಮಾಡಿದ ವಿಶ್ವದ 12ನೇ ಬ್ಯಾಟ್ಸ್ಮನ್ ಆಗಿ ಹಾಗೂ ಭಾರತದ 3ನೇ ಆಟಗಾರನಾಗಿ ವಿರಾಟ್ ದಾಖಲೆ ನಿರ್ಮಿಸಲಿದ್ದಾರೆ. ಈ ಹಿಂದೆ ಸಚಿನ್ ಹಾಗೂ ರಾಹುಲ್ ದ್ರಾವಿಡ್ ಈ ದಾಖಲೆಯನ್ನು ಬರೆದಿದ್ದಾರೆ.
ಆದರೆ, ಕಡಿಮೆ ಪಂದ್ಯದಲ್ಲಿ ಈ ದಾಖಲೆ ಮಾಡಿರುವ ಹೆಗ್ಗಳಿಕೆ ಸಚಿನ್ ಹಾಗೂ ಲಾರಾ ಹೆಸರಿನಲ್ಲಿವೆ. ಒಂದೊಮ್ಮೆ ಅಪ್ಘಾನ್ ವಿರುದ್ಧದ ಪಂದ್ಯದಲ್ಲಿ 104 ರನ್ ಸಿಡಿಸಿದರೆ ಕೊಹ್ಲಿ ಹೆಸರಿಗೆ ಈ ದಾಖಲೆ ಸೇರಲಿದೆ. ಕೊಹ್ಲಿ ಈಗ ಅಂತಾರಾಷ್ಟ್ರೀಯ ಏಕದಿನದಲ್ಲಿ 11020 ರನ್, ಟೆಸ್ಟ್ ನಲ್ಲಿ 6613 ರನ್, ಟಿ20ಯಲ್ಲಿ 2263 ರನ್ ಬಾರಿಸಿದ್ದಾರೆ.
20,000 ರನ್ ಗೆರೆ ದಾಟಲು ಕ್ರಿಕೆಟ್ ದಿಗ್ಗಜರಾದ ಸಚಿನ್ ಮತ್ತು ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ ಇಬ್ಬರೂ ತಲಾ 453 ಇನ್ನಿಂಗ್ಸ್ಗಳನ್ನು ಬಳಿಸಿಕೊಂಡಿದ್ದರು. ಆದರೆ ಕೊಹ್ಲಿ ಸದ್ಯ 415 ಅಂತಾರಾಷ್ಟ್ರೀಯ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. ಒಂದೊಮ್ಮೆ ಮುಂದಿನ ಪದ್ಯದಲ್ಲೇ 20 ಸಾವಿರ ರನ್ ಪೂರೈಸಿದರೆ ಈ ದಾಖಲೆ ಅವರ ಪಾಲಾಗಲಿದೆ. ತಪ್ಪಿದರೆ ಈ ವಿಶ್ವಕಪ್ ನ ಉಳಿದ ಪಂದ್ಯದ ಮೂಲಕವಾದರೂ ಈ ದಾಖಲೆಯನ್ನು ಬರೆಯಲು ಕೊಹ್ಲಿಗೆ ಅವಕಾಶವಿದೆ.