ಲಂಡನ್, ಜು. 13 (DaijiworldNews/AK): ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ನಲ್ಲಿಂದು ಕಾರ್ಲೋಸ್ ಅಲ್ಕರಾಜ್ಅವರು ಇದೇ ಮೊದಲ ಬಾರಿಗೆ ಫೈನಲ್ ತಲುಪಿರುವ ಜಾನಿಕ್ ಸಿನ್ನರ್ ಅವರನ್ನ ಎದುರಿಸಲಿದ್ದಾರೆ. ಪುರುಷರ ಟೆನ್ನಿಸ್ನಲ್ಲಿ ಉತ್ತುಂಗಕ್ಕೇರಲು ಇಬ್ಬರು ಯುವ ತಾರೆಗಳ ಪೈಪೋಟಿ ನಡೆಯಲಿದೆ.

ಲಂಡನ್ನಲ್ಲಿ ವಿಂಬಲ್ಡನ್ ಸೆಂಟರ್ ಕೋರ್ಟ್ನಲ್ಲಿ ಫೈನಲ್ ಹಣಾಹಣಿ ನಡೆಯಲಿದ್ದು, ರಾತ್ರಿ 8:30ಕ್ಕೆ ಗೇಮ್ ಶುರುವಾಗಲಿದೆ. ಕಳೆದ ಎರಡೂ ಆವೃತ್ತಿಗಳಲ್ಲಿ ದಿಗ್ಗಜ ನೊವಾಕ್ ಜೊಕೊವಿಕ್ ಅವರನ್ನ ಮಣಿಸಿ 2 ಬಾರಿ ಪ್ರಶಸ್ತಿ ಪಡೆದ ಅಲ್ಕರಾಜ್ ಸತತ 3ನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ತವಕದಲ್ಲಿದ್ದಾರೆ.
ಇದೇ ಮೊದಲ ಬಾರಿಗೆ ಫೈನಲ್ ತಲುಪಿರುವ ಜಾನಿಕ್ ಸಿನ್ನರ್ ಕೂಡ ಪ್ರಶಸ್ತಿ ಗೆಲ್ಲುವ ಛಲದಲ್ಲಿದ್ದಾರೆ. ಕೊನೆಯ 8 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳಲ್ಲಿ ಏಳನ್ನು ಇವರಿಬ್ಬರು ಹಂಚಿಕೊಂಡಿದ್ದಾರೆ. 2024ರ ಬಳಿಕ ತಲಾ ಮೂರು ಪ್ರಮುಖ ಟೂರ್ನಿಗಳಲ್ಲಿ ಇವರಿಬ್ಬರು ಚಾಂಪಿಯನ್ ಆಗಿದ್ದಾರೆ.