ಬರ್ಮಿಂಗ್ಹ್ಯಾಮ್, ಜೂ 26 (Daijiworld News/SM): ಈ ಬಾರಿಯ ವಿಶ್ವಕಪ್ ಹಲವು ಹೊಸದುಗಳಿಗೆ ಸಾಕ್ಷಿಯಾಗಿದೆ. ಅಲ್ಲದೆ ಹಲವು ದಾಖಲೆಗಳು ಈ ಸಲದ ವಿಶ್ವಕಪ್ ನಲ್ಲಿ ದಾಖಲಾಗಿವೆ. ಈ ಬಾರಿಯ ದಾಖಲೆ ಪಾಕ್ ಪಾಲಿಗೆ ಸಂದಿದೆ.
ಪಾಕಿಸ್ತಾನದ ಬಾಬರ್ ಅಜಂ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 3000 ರನ್ ದಾಖಲಿಸಿದ ಏಷ್ಯಾದ ಮೊದಲ ಹಾಗೂ ವಿಶ್ವದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಈ ದಾಖಲೆ ಬರೆದಿದ್ದಾರೆ. 68 ಇನ್ನಿಂಗ್ಸ್ಗಳಲ್ಲಿ 3000 ರನ್ ಗಳಿಸಿದ ಸಾಧನೆಗೈದಿದ್ದಾರೆ.
ಈ ಮೂಲಕ ಹಲವು ದಾಖಲೆಗಳು ಉಡೀಸ್ ಆಗಿವೆ. ವಿಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್ 69 ಪಂದ್ಯಗಳಲ್ಲಿ ಈ ಸಾಧನೆಗೈದಿದ್ದಾರೆ. ಗ್ರೀನಿಡ್ಜ್ 72 ಪಂದ್ಯಗಳಲ್ಲಿ ಮೂರು ಸಾವಿರ ರನ್ ಪೂರೈಸಿದ್ದು, ದಕ್ಷಿಣ ಆಫ್ರಿಕಾದ ಗ್ಯಾರಿ ಕಸ್ಟರ್ನ್, ಭಾರತದ ಶಿಖರ್ ಧವನ್, ಇಂಗ್ಲೆಂಡ್ನ ರೂಟ್ 72 ಪಂದ್ಯಗಳಿಂದ ಮೂರು ಸಾವಿರ ರನ್ ಪೂರೈಸಿದ್ದರು. ಈ ಎಲ್ಲಾ ದಾಖಲೆಗಳು ಉಡೀಸ್ ಆಗಿವೆ.